ವಾಷಿಂಗ್ಟನ್, ಫೆ.03(DaijiworldNews/HR): ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ರಾಷ್ಟ್ರೀಯ ವಲಸೆ ಕಾನೂನು ನ್ಯಾಯಯುತ ಹಾಗೂ ದಕ್ಷವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಡೊನಾಲ್ಡ್ ಟ್ರಂಪ್ ಆಡಳಿತದ ವಲಸೆ ನೀತಿ ರದ್ದುಗೊಳಿಸುವ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ ವಲಸೆ ವ್ಯವಸ್ಥೆ ನೀತಿಯಲ್ಲಿ ಕಳವಳವನ್ನು ವ್ಯಕ್ತಪಡಿಸಿರುವ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ದಕ್ಷಿಣ ಗಡಿಯಲ್ಲಿ ಬೇರ್ಪಟ್ಟ ವಲಸೆ ಕುಟುಂಬಗಳನ್ನು ಮತ್ತೆ ಪೋಷಕರೊಂದಿಗೆ ಒಂದುಗೂಡಿಸುವುದು ಸೇರಿದಂತೆ ಮೂರು ಪ್ರಮುಖ ವಲಸೆ ನೀತಿಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ಇನ್ನು "ಟ್ರಂಪ್ ಶೂನ್ಯ ಸಹನೆ ವಲಸೆ ನೀತಿಯಿಂದಾಗಿ ಅನೇಕ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳಿಂದ ಬೇರ್ಪಟ್ಟಿದ್ದು, ಕುಟುಂಬಗಳನ್ನು ಪ್ರತ್ಯೇಕಿಸಿ ಮಕ್ಕಳ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸಿರುವುದು ಹಿಂದಿನ ಆಡಳಿತದ ನೈತಿಕ ವೈಫಲ್ಯವಾಗಿದ್ದು, ರಾಷ್ಟ್ರೀಯ ಅವಮಾನವಾಗಿದೆ" ಎಂದು ಬಿಡೆನ್ ಹೇಳಿದ್ದಾರೆ.