ವುಹಾನ್, ಫೆ.03 (DaijiworldNews/PY): ವಿಶ್ವ ಆರೋಗ್ಯ ಸಂಸ್ಥೆಯ ತನಿಖಾಧಿಕಾರಿಗಳು ಬುಧವಾರ ಚೀನಾದ ವುಹಾನ್ನಲ್ಲಿರುವ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದರು.
ವುಹಾಣ್ನ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಕೊರೊನಾ ಸೋಂಕು ಉಗಮವಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿತ್ತು. ಈ ಹಿನ್ನೆಲೆ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ ಡಬ್ಲ್ಯೂಎಚ್ಒ ತಂಡ, ವೈರಾಣುವಿನ ಉಗಮದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದೆ.
ಇದೇ ಸಂಶೋಧನಾ ಕೇಂದ್ರದಲ್ಲಿ 2003ರಲ್ಲಿ ಸಾರ್ಸ್ ಬಗ್ಗೆ ಪತ್ತೆ ಮಾಡಲಾಗಿತ್ತು. ಆ ಕಾರಣದಿಂದ 2019ರಲ್ಲಿ ಉಗಮವಾದ ಕೊರೊನಾ ವೈರಸ್ ಇದುವೇ ಸಂಶೋಧನಾ ಕೇಂದ್ರದ ಪ್ರಯೋಗಾಲಯದಿಂದ ಕಾಣಿಸಿಕೊಂಡಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಚೀನಾ, "ಇತರೆ ದೇಶಗಳಿಂದ ಚೀನಾಕ್ಕೆ ಸೀಫುಡ್ ಅನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈ ಸಂದರ್ಭ ಚೀನಾಕ್ಕೆ ಕೊರೊನಾ ವೈರಸ್ ಬಂದಿರಬಹುದು" ಎಂದಿದೆ. ಆದರೆ, ಚೀನಾದ ಈ ಪ್ರತಿಪಾದನೆಯನ್ನು ಅಂತರಾಷ್ಟ್ರೀಯ ವಿಜ್ಞಾನಿಗಳು ಅಲ್ಲಗೆದಿದ್ದಾರೆ.
ಈ ಹಿಂದೆ ಸಾರ್ಸ್ ವೈರಸ್ನ ಮೂಲವನ್ನು ಪತ್ತೆ ಮಾಡಿದ್ದ ಪ್ರಾಣಿಶಾಸ್ತ್ರಜ್ಞ ಪೀಟರ್ ದಾಸ್ಜಾಕ್ ಅವರ ನೇತೃತ್ವದ ತಂಡದಲ್ಲಿ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ಉಪ ನಿರ್ದೇಶಕ ಶಿ ಝಿಂಗ್ಲಿ ಸಹ ಇದ್ದಾರೆ.