ವಾಷಿಂಗ್ಟನ್, ಫೆ.03 (DaijiworldNews/PY): ಅಮೆಜಾನ್ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ಈ ವರ್ಷದ ಕೊನೆಯಲ್ಲಿ ತ್ಯಜಿಸುವುದಾಗಿ ಜೆಫ್ ಬೆಜೋಸ್ ತಿಳಿಸಿದ್ದಾರೆ.
ರಜಾ ಕಾಲದ ತ್ರೈಮಾಸಿಕದಲ್ಲಿ ಅಮೆಜಾನ್ನಲ್ಲಿ ಲಾಭ ಹಾಗೂ ಆದಾಯದಲ್ಲಿ ಏರಿಕ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ, ಪ್ರಸ್ತುತ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆಂಡಿ ಜೆಸ್ಸಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ಕಂಪೆನಿಯ ಆದಾಯವು ರಜೆ ಕಾಲದ ತ್ರೈಮಾಸಿಕದಲ್ಲಿ ದುಪ್ಪಟ್ಟು 7.2 ಬಿಲಿಯನ್ ಡಾಲರ್ ಏರಿಕೆಯಾಗಿದ್ದು, ಶೇ.44ರಷ್ಟು ಜಿಗಿದು, 125.6 ಬಿಲಿಯನ್ ಡಾಲರ್ಗಳಿಗೆ ಹೆಚ್ಚಿದೆ ಎನ್ನುವ ವರದಿಗಳ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.
"ಜೆಸ್ಸಿಗೆ ಸಿಇಒ ಹುದ್ದೆಯನ್ನು ಹಸ್ತಾಂತರಿಸುವ ಮುಖೇನ ಮೂರನೇ ತ್ರೈಮಾಸಿಕದ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಪರಿವರ್ತನೆಯಾಗಲಿದೆ" ಎಂದು ಜೆಫ್ ಬೆಜೋಸ್
"ಅಮೆಜಾನ್ ಪ್ರಸ್ತುತ ಏನಾಗಿದೆಯೋ ಅದಕ್ಕೆ ಅದರ ಆವಿಷ್ಕಾರವೇ ಕಾರಣ" ಎಂದು ಹೇಳಿಕೆಯಲ್ಲಿ ವಿವರಿಸಿದ್ದಾರೆ.
"ನಾನು ಇದೀಗ ಅಮೆಜಾನ್ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ಕಾಣುತ್ತಿದ್ದೇನೆ. ಇದು ಅದರ ಪರಿವರ್ತನೆಗೆ ಸೂಕ್ತ ಸಮಯ" ಎಂದು ತಿಳಿಸಿದ್ದಾರೆ.
ಜೆಸ್ಸಿ ಅವರು 1997ರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರ್ಪಡೆಯಾಗಿದ್ದರು. 2003ರಲ್ಲಿ ಅವರು ವೆಬ್ ವಿಭಾಗ ಎಡಬ್ಲ್ಯೂಎಸ್ ಅನ್ನು ಸ್ಥಾಪಿಸಿದ್ದಾರೆ.