ಯಾಂಗೂನ್, ಫೆ.03 (DaijiworldNews/PY): ಮಿಲಿಟರಿ ದಂಗೆ ಎದ್ದು ದೇಶದ ಆಡಳಿತವನ್ನು ವಶಪಡಿಸಿಕೊಂಡ ಕ್ರಮದ ವಿರುದ್ದ ಪ್ರತಿಭಟನೆ ವ್ಯಕ್ತಪಡಿಸುವ ಸಲುವಾಗಿ ಮ್ಯಾನ್ಮಾರ್ ಜನತೆ ವಿವಿಧ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಯಾಂಗೂನ್ನಲ್ಲಿ ಕೆಲ ಮಂದಿ ಬಿಂದಿಗೆ, ತಟ್ಟೆ ಹಾಗೂ ವಿವಿಧ ಪಾತ್ರೆಗಳನ್ನು ಬಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದು, ಇನ್ನೂ ಕೆಲ ಮಂದಿ ತಮ್ಮ ಕಾರುಗಳ ಹಾರ್ನ್ ಶಬ್ದವನ್ನು ಜೋರಾಗಿ ಹಾಕುವ ಮುಖಾಂತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವು ಕಡೆ ಈ ರೀತಿಯಾಗಿ ಕಂಡುಬಂದ ಪ್ರತಿಭಟನೆಯು ಕೆಲ ನಿಮಿಷಗಳ ಕಾಲ ಇರಲಿದೆ ಎಂದು ಭಾವಿಸಲಾಗಿತ್ತು. ಆದರೆ, ಈ ಪ್ರತಿಭಟನೆಯು ನಗರದ ಇತರ ಪ್ರದೇಶಗಳಿಗೂ ಕೂಡಾ ವ್ಯಾಪಿಸಿದ್ದು, ಗಂಟೆಗಳ ಕಾಲ ಈ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಕೆಲ ಪ್ರತಿಭಟನಾಕಾರರು ಆಂಗ್ ಸಾನ್ ಸೂ ಕಿ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆ ಕೂಗಿದ್ದು ಕಂಡುಬಂದಿದೆ.