ವಾಷಿಂಗ್ಟನ್,ಫೆ.05 (DaijiworldNews/HR): "ಮಿತ್ರ ರಾಷ್ಟ್ರಗಳೊಂದಿಗಿನ ಸಂಬಂಧವನ್ನು ಸುಧಾರಿಸಲು ನನ್ನ ಆಡಳಿತ ಒತ್ತು ನೀಡಲಿದೆ" ಎಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, "ಅಮೇರಿಕಾದ ರಾಜತಾಂತ್ರಿಕ ವ್ಯವಸ್ಥೆ ವಿಶ್ವ ಸಮುದಾಯದೊಂದಿಗೆ ಹೆಜ್ಜೆ ಹಾಕಲು ಎದುರು ನೋಡುತ್ತಿದ್ದು, ಕಳೆದು ಹೋದ ದಿನಗಳಲ್ಲಿ ಎದುರಾಗಿದ್ದ ಸವಾಲುಗಳ ಬಗ್ಗೆ ಮಾತನಾಡುವುದಿಲ್ಲ. ಈ ದಿನ, ನಾಳೆ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಲು ಅಮೇರಿಕಾ ಸಿದ್ಧವಾಗಿದೆ" ಎಂದರು.
ಇನ್ನು ಅಮೇರಿಕಾಗೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಚೀನಾದ ಮಹತ್ವಾಕಾಂಕ್ಷೆ, ನಮ್ಮ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹವಣಿಸುತ್ತಿರುವ ರಷ್ಯಾ ಒಡ್ಡಿರುವಂತಹ ಸವಾಲುಗಳನ್ನು ದೇಶದ ನಾಯಕತ್ವ ಎದುರಿಸಬೇಕಾಗಿದೆ" ಎಂದು ಹೇಳಿದ್ದಾರೆ.