ವಾಷಿಂಗ್ಟನ್, ಫೆ.05 (DaijiworldNews/PY): ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಡಳಿತವು, ಎಚ್-1ಬಿ ವೀಸಾ ಕೋರಿ ಸಲ್ಲಿಕೆಯಾದ ಅರ್ಜಿಗಳ ಅಂತಿಮ ಪಟ್ಟಿಯನ್ನು ತಯಾರಿಸಲು ಪ್ರಸ್ತುತ ರೂಢಿಯಲ್ಲಿರುವ ಲಾಟರಿ ವ್ಯವಸ್ಥೆಯನ್ನು ಈ ವರ್ಷದ ಡಿ.31ರ ತನಕ ಮುಂದುವರೆಸಲು ತೀರ್ಮಾನಿಸಿದೆ.
ಸಾಂದರ್ಭಿಕ ಚಿತ್ರ
ಅಮೇರಿಕಾ ನಾಗರಿಕತ್ವ ಹಾಗೂ ವಲಸೆಗಳ ಇಲಾಖೆಯು, ಲಾಟರಿ ವ್ಯವಸ್ಥೆಯನ್ನು ರದ್ದುಪಡಿಸುವುದಾಗಿ ಜ.7ರಂದು ಹೇಳಿತ್ತು.
ಅಮೇರಿಕಾದ ಕಂಪೆನಿಗಳಿಗೆ ವಿಶೇಷ ಕೌಶಲ ಹೊಂದಿರುವ ಅಭ್ಯರ್ಥಿಗಳ ನೇಮಕಕ್ಕೆ ಎಚ್–1ಬಿ ವೀಸಾ ಸೌಲಭ್ಯವು ಅನುವು ಮಾಡಿಕೊಡುತ್ತದೆ. ಅಮೇರಿಕಾ ಐಟಿ ಕಂಪೆನಿಗಳು ಭಾರತ-ಚೀನಾ ಮೂಲದ ಸಾವಿರಾರು ಮಂದಿ ಅಭ್ಯರ್ಥಿಗಳನ್ನು ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಪ್ರತಿ ವರ್ಷ ನೇಮಕ ಮಾಡಿಕೊಳ್ಳುತ್ತದೆ.
ಎಚ್–1ಬಿ ವೀಸಾ ಪಡೆದುಕೊಳ್ಳಲು ನೋಂದಾಯಿಸುವ ವಿಧಾನ, ಆಯ್ಕೆ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪರಿಷ್ಕೃತವಾದ ನಿಯಮಗಳನ್ನು ರೂಪಿಸಲು ಯುಎಸ್ಸಿಐಎಸ್ಗೆ ಅಧಿಕ ಸಮಯದ ಅವಶ್ಯಕತೆ ಇದೆ. ಈ ಹಿನ್ನೆಲೆ ಲಾಟರಿ ವ್ಯವಸ್ಥೆಯನ್ನು ಡಿ.31ರ ತನಕ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.