ವಾಷಿಂಗ್ಟನ್, ಫೆ.06 (DaijiworldNews/PY): "ಚೀನಾದಿಂದ ಹಾಂಗ್ಕಾಂಗ್, ಟಿಬೇಟ್ ಹಾಗೂ ತನ್ನದೇ ಪ್ರಾಂತ್ಯವಾದ ಷಿನ್ಜಿಯಾಂಗ್ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ" ಎಂದು ಅಮೇರಿಕಾ ತಿಳಿಸಿದೆ.
ಚೀನಾದ ವಿದೇಶಾಂಗ ಕಾರ್ಯದರ್ಶಿ ಯಾಂಗ್ ಜಿಯೆಚಿ ಅವರ ಜೊತೆ ನಡೆಸಿದ ಮಾತುಕತೆಯ ಸಂದರ್ಭ ಅಮೇರಿಕಾದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಆ್ಯಂಟೊನಿ ಬ್ಲಿಂಕೆನ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಬ್ಲಿಂಕೆನ್ ಅವರು, "ಚೀನಾ ಮಾನವ ಹಕ್ಕುಗಳ ರಕ್ಷಣೆ ಹಾಗೂ ವಿವಿಧ ವಿಷಯಗಳಿಗೆ ಸಂಬಂಧಿಸಿ ಜಾರಿಯಲ್ಲಿರುವ ಅಂತರಾಷ್ಟ್ರೀಯ ವ್ಯವಸ್ಥೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ. ಚೀನಾವನ್ನು ಈ ನಡೆಯ ಸಲುವಾಗಿ ನೇರ ಹೊಣೆಯನ್ನಾಗಿ ಮಾಡಲಾಗುವುದು" ಎಂದಿದ್ದಾರೆ.
"ಅಮೇರಿಕಾ ಎಂದಿಗೂ ಕೂಡಾ ಮಾನವ ಹಕ್ಕುಗಳ ರಕ್ಷಣೆಯ ಪರವಾಗಿ ಧ್ವನಿ ಎತ್ತಲಿದೆ. ಮ್ಯಾನ್ಮಾರ್ನಲ್ಲಿ ನಡೆದ ಮಿಲಿಟರಿ ದಂಗೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಚೀನಾ ಈ ಮಿಲಿಟರಿ ದಂಗೆಯನ್ನು ಖಂಡಿಸಬೇಕು" ಎಂದು ಯಾಂಗ್ ಅವರಿಗೆ ಬ್ಲಿಂಕನ್ ಅವರು ತಿಳಿಸಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ನೆಡ್ ಪ್ರಿನ್ಸ್ ಹೇಳಿದ್ದಾರೆ.