ಕಠ್ಮಂಡು, ಫೆ.07 (DaijiworldNews/PY): "ಹಿಮಾಲಯ ಕಣಿವೆಯನ್ನು ಹಲವಾರು ಹಲವು ಪ್ರದೇಶಗಳ ಜೊತೆ ಸಂಪರ್ಕಿಸುವ ನೂತನವಾಗಿ ನಿರ್ಮಿಸಲಾದ 108 ಕಿ.ಮೀ. ಉದ್ದದ ರಸ್ತೆಯನ್ನು ಭಾರತ-ನೇಪಾಳ ಜಂಟಿಯಾಗಿ ಉದ್ಘಾಟಿಸಿವೆ" ಎಂದು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.
ಸಾಂದರ್ಭಿಕ ಚಿತ್ರ
ನೂತನವಾಗಿ ನಿರ್ಮಿಸಲಾದ ಈ ರಸ್ತೆಯು ಗಡಿಯುದ್ದಕ್ಕೂ ದೈನಂದಿನ ಸಂಚಾರವನ್ನು ಸುಗಮಗೊಳಿಸಲಿದೆ.
ಭಾರತದ ಅನುದಾನದ ನೆರವಿನೊಂದಿಗೆ ನಿರ್ಮಸಲಾದ ಈ ರಸ್ತೆಯು ಗಡಿ ಲಕ್ಷ್ಮಿಪುರ-ಬಲಾರಾದಿಂದ ಸರ್ಲಾಹಿ ಜಿಲ್ಲೆಯ ಗಧೈಯಾವರೆಗಿನ ರಸ್ತೆಯನ್ನು ಡಾಮರೀಕರಣ ಮಾಡಲಾಗಿದೆ.
ನೂತನ ರಸ್ತೆಯ ಉದ್ಘಾಟನೆಯ ಸಂದರ್ಭ ಭಾರತದ ಕಾನ್ಸುಲೇಟ್ ಜನರಲ್ ನಿತೇಶ್ ಕುಮಾರ್, ಚಂದ್ರನಿಗಪುರ ರಸ್ತೆ ವಿಭಾಗದ ಮುಖ್ಯಸ್ಥ ಬಿನೋದ್ ಹಾಗೂ ಬಿರ್ಗುಂಜ್ ಉಪಸ್ಥಿತರಿದ್ದರು.
ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೀಡಿದ ಮಾಹಿತಿಯ ಪ್ರಕಾರ, "ಭಾರತವು ರಸ್ತೆ ನಿರ್ಮಾಣಕ್ಕಾಗಿ ಸುಮಾರು 4.4 ಕೋಟಿ ರೂ.ಗಳ ಅನುದಾನ ನೀಡಿದೆ. ಭಾರತ ಮತ್ತು ನೇಪಾಳ ಸರ್ಕಾರಗಳ ನಡುವಿನ ಒಪ್ಪಂದದ ಪ್ರಕಾರ, ಈ ರಸ್ತೆಯು ಇಲ್ಲಿನ ಸಮುದಾಯ ಅಭಿವೃದ್ಧಿ ಯೋಜನೆಯಾಗಿ ತೆಗೆದುಕೊಳ್ಳಲಾಗಿದೆ" ಎಂದು ಹೇಳಿದೆ.
"ಇಂಡೋ-ನೇಪಾಳ ಗಡಿಯನ್ನು ಸಂಪರ್ಕಿಸುವ ಹೊಸದಾಗಿ ನಿರ್ಮಿಸಲಾದ ರಸ್ತೆಯು ಗಡಿಯುದ್ದಕ್ಕೂ ದೈನಂದಿನ ಪ್ರಯಾಣಿಕರ ಸಂಚಾರವನ್ನು ಸರಾಗಗೊಳಿಸುವ ನಿರೀಕ್ಷೆಯಿದೆ" ಎಂದು ತಿಳಿಸಿದೆ.
ಕಳೆದ ವರ್ಷ ಮೇ 8 ರಂದು ಉತ್ತರಾಖಂಡದ ಧಾರ್ಚುಲಾದೊಂದಿಗೆ ಲಿಪುಲೆಖ್ ಪಾಸ್ ಅನ್ನು ಸಂಪರ್ಕಿಸುವ 80 ಕಿ.ಮೀ ಉದ್ದದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಿದ ನಂತರ ಭಾರತ-ನೇಪಾಳ ದ್ವಿಪಕ್ಷೀಯ ಸಂಬಂಧಗಳು ಬಿಗಡಾಯಿಸಿದ್ದವು.
ರಸ್ತೆಯ ಉದ್ಘಾಟನೆಗೆ ನೇಪಾಳ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಇದು ನೇಪಾಳದ ಭೂಪ್ರದೇಶದ ಮೂಲಕ ಹಾದುಹೋಗಿದೆ. ರಸ್ತೆ ಸಂಪೂರ್ಣವಾಗಿ ತನ್ನ ಭೂಪ್ರದೇಶದಲ್ಲಿದೆ ಎಂದು ಪ್ರತಿಪಾದಿಸಿದ ಭಾರತ ಈ ಹಕ್ಕನ್ನು ತಿರಸ್ಕರಿಸಿತು.