ಮಾಸ್ಕೋ, ಫೆ.09 (DaijiworldNews/MB) : ''ಕೊರೊನಾ ಸೋಂಕಿತ ರೋಗಿಗಳಿಗೆ ಕ್ಷಯರೋಗ ಬರುವ ಸಾಧ್ಯತೆ ಅಧಿಕವಾಗಿದೆ'' ಎಂದು ರಷ್ಯಾದ ಆರೋಗ್ಯ ಸಚಿವಾಲಯ ಎಚ್ಚರಿಸಿದೆ.
''ಕೊರೊನಾ ರೋಗಕ್ಕೆ ಒಳಗಾದವರಲ್ಲಿ ಶ್ವಾಸಕೋಶದಲ್ಲಿ ಫೈಬ್ರೋಸಿಸ್ ರೂಪದಲ್ಲಿ ಉಳಿದಿರುವ ಬದಲಾವಣೆಗಳು ಅಭಿವೃದ್ದಿಯಾಗುತ್ತದೆ. ಈ ರೋಗಿಗಳಿಗೆ ಮುಂದೆ ಕ್ಷಯ ರೋಗ ಬರುವ ಸಾಧ್ಯತೆಯಿದೆ'' ಎಂದು ಸಚಿವಾಲಯ ಹೇಳಿದೆ.
ಇನ್ನು, ''ಕೊರೊನಾ ಸೋಂಕು ಇರುವ ವೇಳೆ ಅಥವಾ ಸೋಂಕಿನಿಂದ ಗುಣಮುಖರಾದ ಬಳಿಕ ಕ್ಷಯ ರೋಗ ಕಾಣಿಸಿಕೊಳ್ಳಬಹುದು. ಶಂಕಿತರು ಕೂಡಲೇ ಕ್ಷಯ ರೋಗ ತಪಾಸಣೆಗೆ ಒಳಪಡಬೇಕು'' ಎಂದು ಸಚಿವಾಲಯ ತಿಳಿಸಿದೆ.
''ಕ್ಯಾನ್ಸರ್ ರೋಗಿಗಳಲ್ಲಿ ಕೊರೊನಾ ತೀವ್ರ ಸ್ವರೂಪದಲ್ಲಿ ಅಭಿವೃದ್ದಿಯಾಗುವ ಅಪಾಯವಿದೆ. ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳುವುದು ಉತ್ತಮ ಎಂದು ಹೇಳಿರುವ ಸಚಿವಾಲಯವು, ಕ್ಯಾನ್ಸರ್ ರೋಗಿಗಳಿಗೆ ವಿಶೇಷ ಕೊರೊನಾ ಚಿಕಿತ್ಸೆ ಇಲ್ಲ'' ಎಂದು ಕೂಡಾ ತಿಳಿಸಿದೆ.