ಲಂಡನ್, ಫೆ.10 (DaijiworldNews/PY): ಬ್ರಿಟನ್ ರಾಜಕುಮಾರಿ ಯೂಜೆನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಂಕಿಂಗ್ಹ್ಯಾಂ ಅರಮನೆಯ ಪ್ರಕಟಣೆ ತಿಳಿಸಿದೆ.
ಮೊಮ್ಮಗಳಾಗಿರುವ ಯೂಜೆನಿ ಹಾಗೂ ಅವರ ಪತಿ ಜ್ಯಾಕ್ ಬ್ರೂಕ್ಸ್ಬ್ಯಾಂಕ್ ಅವರು ಲಂಡನ್ನ ಪೋರ್ಟ್ಲ್ಯಾಂಡ್ ಆಸ್ಪತ್ರೆಯಲ್ಲಿ ಮಗುವನ್ನು ಸ್ವಾಗತಿಸಿದ್ದಾರೆ.
ಇದು ಯೂಜೆನಿ ಹಾಗೂ ಬ್ರೂಕ್ಸ್ಬ್ಯಾಂಕ್ ದಂಪತಿಯ ಮೊದಲ ಮಗುವಾಗಿದ್ದು, ಎರಡನೇ ರಾಣಿ ಎಲಿಜಬೆತ್ ಅವರ ಒಂಬತ್ತನೇ ಮೊಮ್ಮಗುವಾಗಿದೆ. ಶಿಶುವು 8 ಪೌಂಡ್, 1 ಔನ್ಸ್ನಷ್ಟಿದೆ.
ತಾಯಿ ಹಾಗೂ ಮಗು ಆರೋಗ್ಯದಿಂದಿದ್ದಾರೆ ಎಂದು ಅರಮನೆ ಪ್ರಕಟಣೆ ತಿಳಿಸಿದೆ.
2018ರ ಅಕ್ಟೋಬರ್ನಲ್ಲಿ ಯೂಜೆನಿ ಅವರು ಬ್ರೂಕ್ಸ್ಬ್ಯಾಂಕ್ ಅವರನ್ನು ವಿವಾಹವಾಗಿದ್ದರು.