ಸೌದಿ ಅರೇಬಿಯ, ಫೆ.11(DaijiworldNews/HR): ಯೆಮನ್ನ ಹೌದಿ ಬಂಡುಕೋರರು ಸೌದಿ ಅರೇಬಿಯದ ಅಬಾ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದ್ದಾರೆ ಎಂದು ಬಂಡುಕೋರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆ ತಿಳಿಸಿದೆ ಎನ್ನಲಾಗಿದೆ.
ವಿಮಾನ ನಿಲ್ದಾಣದ ಮೇಲೆ ನಡೆಸಿದ ದಾಳಿಯಿಂದಾಗಿ ನಾಗರಿಕ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡಿದ್ದು, ಬೆಂಕಿಯನ್ನು ಬಳಿಕ ನಿಯಂತ್ರಣಕ್ಕೆ ತರಲಾಗಿದೆ ಎಂದು ಮಿತ್ರಕೂಟ ಹೇಳಿದೆ ಎಂದು ವರದಿಯಾಗಿದೆ.
ಇನ್ನು ದಾಳಿಯ ಹೊಣೆಯನ್ನು ಹೌದಿ ಬಂಡುಕೋರರು ವಹಿಸಿಕೊಂಡಿದ್ದು, ದಕ್ಷಿಣ ಸೌದಿ ಅರೇಬಿಯದಲ್ಲಿರುವ ವಿಮಾನ ನಿಲ್ದಾಣವನ್ನು ಸ್ಫೋಟಿಸಲು ಬಾಂಬ್ಗಳನ್ನು ಹೊಂದಿದ ನಾಲ್ಕು ಡ್ರೋನ್ಗಳನ್ನು ಉಡಾಯಿಸಿರುವುದಾಗಿ ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.