ವಾಷಿಂಗ್ಟನ್, ಫೆ.12 (DaijiworldNews/PY): "ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ವಾಗ್ದಂಡನೆಗೆ ಒಳಪಡಿಸುವ ಬಗ್ಗೆ ಎರಡನೇ ಬಾರಿಗೆ ವಿಚಾರಣೆ ನಡೆಯುತ್ತಿದ್ದು, ಇದರಿಂದ ಟ್ರಂಪ್ ಅವರನ್ನು ಖುಲಾಸೆಗೊಳಿಸಬಾರದು" ಎಂದು ರಿಪಬ್ಲಿಕನ್ ಪಕ್ಷದ ಸೆನೆಟರ್ಗಳನ್ನು ಒತ್ತಾಯಿಸಿದ್ದಾರೆ.
ವಿಚಾರಣೆ ಸಂದರ್ಭ, "ಟ್ರಂಪ್ ಅವರು ಕ್ಯಾಪಿಟಲ್ ಹಿಲ್ಸ್ ಮೇಲೆ ದಾಳಿ ನಡೆಸಲು ತಮ್ಮ ಬೆಂಬಲಿಗರಿಗೆ ಪ್ರಚೋದನೆ ನೀಡಿದ್ದರು" ಎಂದು ಸದಸ್ಯರು ಆರೋಪಿಸಿದ್ದಾರೆ.
ಕ್ಯಾಪಿಟಲ್ ಹಿಲ್ಸ್ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ವಾಗ್ದಂಡನೆ ಪ್ರಕ್ರಿಯೆಯ ವ್ಯವಸ್ಥಾಪಕರು ಕೆಲವು ವಿಡಿಯೋ ತುಣುಕುಗಳನ್ನು ಪ್ರದರ್ಶಿಸಿದ್ದು, ಈ ದಾಳಿಯು ಅಮೇರಿಕಾದ ಇತಿಹಾಸದಲ್ಲಿ ಅತೀ ಕರಾಳವಾದ ಅಧ್ಯಾಯ ಎಂದರು. ಈ ವೇಳೆ ಅವರು ಈ ಹಿಂದೆ ಬಹಿರಂಗಪಡಿಸದ ದೃಶ್ಯಗಳ ತುಣುಕುಗಳನ್ನು ಪ್ರದರ್ಶಿಸಿದರು.
"ಇಷ್ಟೆಲ್ಲಾ ನಡೆದಿದ್ದರೂ ಕೂಡಾ ಇದು ವಾಗ್ದಂಡನೆಗೆ ಗುರಿ ಮಾಡುವಂತಹ ವಿಚಾರವಲ್ಲ ಎಂದು ನೀವು ಭಾವಿಸುವುದಾದರೆ, ನಾವು ಏನು ಮಾಡಲು ಸಾಧ್ಯ?" ಎಂದು ವಾಗ್ದಂಡನೆ ಪ್ರಕ್ರಿಯೆಯ ವ್ಯವಸ್ಥಾಪಕ ಜೇಮಿ ರಾಸ್ಕಿನ್ ತಿಳಿಸಿದ್ದಾರೆ.