ವಾಷಿಂಗ್ಟನ್, ಫೆ.13 (DaijiworldNews/PY): "ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿರುದ್ದ ಮಂಡಿಸಲಾಗಿರುವ ವಾಗ್ದಂಡನೆಯ ತೀರ್ಮಾನದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ" ಎಂದು ಟ್ರಂಪ್ ಪರ ವಕೀಲರು ಸೆನೆಟ್ಗೆ ತಿಳಿಸಿದ್ದಾರೆ.
ಸೆನೆಟ್ನಲ್ಲಿ ವಾದಿಸಿದ ಟ್ರಂಪ್ ಪರ ವಕೀಲ ಬ್ರೂಸ್ ಕ್ಯಾಸ್ಟರ್ ಅವರು, "ವಾಗ್ದಂಡನೆ ನಿರ್ಣಯದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ. ಟ್ರಂಪ್ ಅವರು ಕಾನೂನು ಸುವ್ಯವಸ್ಥೆಯನ್ನು ರಕ್ಷಿಸಲು ಬದ್ದರಾಗಿದ್ದರು. ಟ್ರಂಪ್ ಅವರ ಭಾಷಣದಿಂದಾಗಿ ಜ.6ರಂದು ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಿಲ್ಲ" ಎಂದಿದ್ದಾರೆ.
"ದಂಗೆಗೆ ಅಮೇರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಚೋದನೆ ನೀಡಿದ್ದಾರೆಯೇ ಎನ್ನುವ ವಿಚಾರ ಪ್ರಶ್ನೆಯಾಗಿಯೇ ಉಳಿದಿದೆ. ಆದರೆ, ಅಮೇರಿಕಾದಲ್ಲಿ ಈ ರೀತಿಯಾದ ದಂಗೆ ನಡೆದಿಲ್ಲ" ಎಂದು ಹೇಳಿದ್ದಾರೆ.
"ಜ.6ರಂದು ಕ್ಯಾಪಿಟಲ್ ಹಿಲ್ ಮೇಲೆ ನಡೆದ ದಾಳಿ ಪೂರ್ವ ಯೋಜಿತವಾದುದು ಎನ್ನುವುದನ್ನು ಎಫ್ಬಿಐ ಸೇರಿದಂತೆ ನ್ಯಾಯಾಂಗ ಇಲಾಖೆ ಹಾಗೂ ಹಲವಾರು ಅಧಿಕಾರಗಳ ವರದಿ ತಿಳಿಸಿತ್ತು. ಹಾಗಿರುವಾಗ ಕ್ಯಾಪಿಟಲ್ ಹಿಲ್ ಮೇಲೆ ಟ್ರಂಪ್ ಅವರ ಭಾಷಣದಿಂದಾಗಿ ದಾಳಿ ನಡೆದಿದೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ಟ್ರಂಪ್ ಅವರ ಭಾಷಣದಿಂದಾಗಿ ಯಾವುದೇ ರೀತಿಯಾದ ದಂಗೆ ನಡೆದಿಲ್ಲ. ಅವರು ಯಾವುದೇ ಕಾರಣಕ್ಕೂ ಕೂಡಾ ದಂಗೆ ನಡೆಯಲು ಪ್ರಚೋದನೆ ನೀಡಿಲ್ಲ. ಬದಲಾಗಿ ಅವರು, ಶಾಂತಿಯುವತವಾಗಿ ನ್ಯಾಯ ನೀಡುವಂತೆ ಕರೆ ನೀಡಿದ್ದರು" ಎಂದಿದ್ದಾರೆ.