ವಾಷಿಂಗ್ಟನ್, ಫೆ.14 (DaijiworldNews/PY): ಅಮೇರಿಕಾದ ಕ್ಯಾಪಿಟಲ್ ಹಿಲ್ ಮೇಲೆ ಜ.6ರಂದು ನಡೆದ ದಾಳಿಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ವಾಗ್ದಂಡನೆ ವಿಚಾರಣೆ ಎದುರಿಸುತ್ತಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಅಮೇರಿಕಾದ ಸೆನೆಟ್ ದೋಷಮುಕ್ತಗೊಳಿಸಿದೆ.
ಟ್ರಂಪ್ ಅವರ ವಿರುದ್ದ ಮಂಡಿಸಲಾದ ವಾಗ್ದಂಡನೆ ನಿರ್ಣಯದ ವಿಚಾರದ ಬಗ್ಗೆ ನಾಲ್ಕು ದಿನಗಳ ವಿಚಾರಣೆಯ ನಂತರ ಅಮೇರಿಕಾದ 100 ಸದಸ್ಯರ ಸೆನೆಟ್, ಡೊನಾಲ್ಡ್ ಟ್ರಂಪ್ ಅವರನ್ನು 57-43 ಮತಗಳಿಂದ ವಾಗ್ದಂಡನೆ ಮಾಡಲು ಮತ ಚಲಾಯಿಸಿದ್ದು, ವಾಗ್ದಂಡನೆಯ ನಿರ್ಣಯವನ್ನು ಮಂಡಿಸಲು ಬೇಕಾದ ಮೂರನೇ ಎರಡರಷ್ಟರಲ್ಲಿ ಹತ್ತು ಮತಗಳ ಅಭಾವವಿತ್ತು.
ಜ.6ರಂದು ಟ್ರಂಪ್ ಬೆಂಬಲಿಗರು ದಂಗೆಯೆದಿದ್ದು, ಅಮೇರಿಕಾದ ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ಮುತ್ತಿಗೆ ಹಾಕಿದ್ದು, ಹಿಂಸಾಚಾರ ನಡೆದಿತ್ತು. ಹಿಂಸಾಚಾರಕ್ಕೆ ಪ್ರಚೋಸನೆ ನೀಡಲಾಗಿದೆ ಎನ್ನುವ ಆರೋಪವನ್ನು ಡೊನಾಲ್ಡ್ ಟ್ರಂಪ್ ಅವರ ಮೇಲೆ ಹೊರಿಸಲಾಗಿತ್ತು.
ವಾಗ್ದಂಡನೆ ಮಾಡುವ ವಿರುದ್ದ ಏಳು ರಿಪಬ್ಲಿಕನ್ ಸೆನೆಟರ್ಗಳು ಮತ ಚಲಾಯಿಸಿದ್ದರೂ ಕೂಡಾ, 50 ಮಂದಿ ಸದಸ್ಯರನ್ನಿಳಗೊಂಡ ಡೆಮಾಕ್ರಾಟ್ಗಳು ಟ್ರಂಪ್ ಅವರನ್ನು ವಾಗ್ದಂಡನೆ ಮಾಡಲು ಅವಶ್ಯಕವಾದ ಮೂರನೇ ಎರಡರಷ್ಟು ಅಥವಾ 67 ಮತಗಳನ್ನು ಪಡೆಯುವಲ್ಲಿ ವಿಫಲವಾಗಿದೆ.
ವಾಗ್ದಂಡನೆಯಿಂದ ದೋಷಮುಕ್ತವಾದ ಬಳಿಕ ಮಾತನಾಡಿದ ಟ್ರಂಪ್, ಇದೀಗಷ್ಟೇ ಆಂದೋಲನ ಆರಂಭವಾಗಿದೆ ಎಂದಿದ್ದಾರೆ.