ರೋಮ್, ಫೆ.14 (DaijiworldNews/MB) : ಇಟಲಿಯ ನೂತನ ಪ್ರಧಾನಿಯಾಗಿ ಅರ್ಥಶಾಸ್ತ್ರಜ್ಞ ಮಾರಿಯೋ ದ್ರಾಘಿ ಅವರು ಅಧಿಕಾರ ಸ್ವೀಕರಿಸಿದ್ದಾರೆ.
"ಸೂಪರ್ ಮಾರಿಯೋ" ಎಂದು ಕರೆಯಲ್ಪಡುವ 73 ವರ್ಷದವರಾದ ಮಾರಿಯೋ ದ್ರಾಘಿ ಅವರು 93,000 ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿರುವ ಕೊರೊನಾ ಬಿಕ್ಕಟ್ಟಿನ ಮಧ್ಯೆ ಈ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಅವರು ಸಂಸತ್ತಿನ ಅತಿದೊಡ್ಡ ಗುಂಪಿನ ಹಾಗೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮುಂದಿನ ವಾರ ಸರ್ಕಾರವು ವಿಶ್ವಾಸ ಮತಕ್ಕೆ ಸಜ್ಜಾಗಿದೆ.