ಇಸ್ಲಾಂ ಖಲ, ಫೆ. 14 (DaijiworldNews/HR): ಅಗ್ನಿ ಅವಘಡ ಸಂಭವಿಸಿ 100ಕ್ಕೂ ಅಧಿಕ ತೈಲ ಟ್ಯಾಂಕರ್ಗಳು ಭಸ್ಮವಾದ ಘಟನೆ ಅಫ್ಗಾನಿಸ್ತಾನ ಮತ್ತು ಇರಾನ್ ಗಡಿ ಪ್ರದೇಶದ ಬಂದರು ಬಳಿ ನಡೆದಿದೆ.
"ಇರಾನ್ನೊಂದಿಗಿನ ಅಫ್ಗಾನಿಸ್ತಾನದ ಅತಿ ದೊಡ್ಡ ವ್ಯಾಪಾರವಾಗಿತ್ತು, ಆದರೆ ಈ ಬೆಂಕಿ ಅವಘಡದಿಂದಾಗಿ ಅಫ್ಗಾನಿಸ್ತಾನಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇನ್ನು "ಹೇರತ್ನಿಂದ 120 ಕಿ.ಮೀ ದೂರದಲ್ಲಿರುವ ಇಸ್ಲಾಂ ಖಲ ಬಂದರಿನಲ್ಲಿ ಶನಿವಾರ ಸಂಜೆಯ ವೇಳೆಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸದ್ಯ ಬೆಂಕಿಯನ್ನು ಭಾಗಶಃ ನಂದಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸಲಾಗಿದೆ" ಎಂದು ತಿಳಿಸಿದ್ದಾರೆ.