ಬಾಗ್ದಾದ್, ಫೆ.16 (DaijiworldNews/PY): ಉತ್ತರ ಇರಾಕ್ನ ಇರ್ಬಿಲ್ ವಿಮಾನ ನಿಲ್ದಾಣದ ಸಮೀಪವಿರುವ ಅಮೇರಿಕಾದ ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದ ರಾಕೆಟ್ ದಾಳಿಯಲ್ಲಿ ಅಮೇರಿಕಾ ನೇತೃತ್ವದ ಮೈತ್ರಿಕೂಟ ಗುತ್ತಿಗೆದಾರರೋರ್ವರು ಸಾವನ್ನಪ್ಪಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ.
ಈ ಪ್ರದೇಶದಲ್ಲಿ ಅರೆ ಸ್ವಾಯತ್ತ ಕುರ್ದಿಷ್ ಆಡಳಿತವಿರುವ ಮೂರು ರಾಕೆಟ್ ವಿಮಾನಗಳು ದಾಳಿ ನಡೆಸಿವೆ. ಈ ಪ್ದೇಶದ ಸಮೀಪವೇ ಅಮೇರಿಕಾ ಪಡೆಗಳ ನೆಲೆಯೂ ಇದೆ. ಗಾರ್ಡಿಯನ್ ಆಫ್ ಬ್ಲಡ್ ಬ್ರಿಗೇಡ್ ಎನ್ನುವ ಹೆಸರಿನ ಶಿಯಾ ಉಗ್ರಗಾಮಿ ಸಂಘಟನೆಯು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ರಾಕೆಟ್ ದಾಳಿಯ ಪರಿಣಾ ಹಲವಾರು ಕಾರುಗಳು ಹಾಗೂ ಇತರ ಆಸ್ತಿಯೂ ಕೂಡಾ ನಾಶವಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ಹೇಳಿದ್ದಾರೆ.
ಇರಾಕ್ನ ಅಧ್ಯಕ್ಷ ಬರ್ಹಾಂ ಸಾಲೇಹ್ ಅವರು ಈ ದಾಳಿಯನ್ನು ಖಂಡಿಸಿದ್ದು, ಘಟನಾ ಪ್ರದೇಶದಿಂದ ಇರ್ಬಿಲ್ ನಿವಾಸಿಗಳು ದೂರವಿರುವಂತೆ ಹಾಗೂ ತಮ್ಮ ಮನೆಗಳಲ್ಲಿಯೇ ಉಳಿಯುವಂತೆ ಸೂಚನೆ ನೀಡಿದ್ದಾರೆ.
ಈ ಪ್ರದೇಶದಲ್ಲಿ ಐದು ತಿಳಗಳ ಬಳಿಕ ನಡೆದ ಮೊದಲ ರಾಕೆಟ್ ದಾಳಿ ಇದಾಗಿದೆ. ಇರಾಕ್ನಲ್ಲಿರುವ ಅಮೇರಿಕಾ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಒತ್ತಡ ಹೇರುವ ನಿಟ್ಟಿನಲ್ಲಿ ರಾಕೆಟ್ ದಾಳಿ ನಡೆಯುತ್ತಿದೆ ಎನ್ನಲಾಗಿದೆ.