ಯಾಂಗೂನ್, ಫೆ.16 (DaijiworldNews/PY): ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯು ತೀವ್ರಗೊಂಡಿದ್ದು, ಈ ಹಿನ್ನೆಲೆ ಮಂಗಳವಾರವೂ ಕೂಡಾ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಮ್ಯಾನ್ಮಾರ್ನ ಹಿರಿಯ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಎರಡು ವಾರಗಳ ಹಿಂದೆ ಮ್ಯಾನ್ಮಾರ್ ಸೇನೆ ಬಂಧಿಸಿದ್ದು, ಇದರ ವಿರುದ್ದ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ.
ಪ್ರತಿಭಟನೆಗಳು ಹಾಗೂ ನಾಗರಿಕ ಸೇವಕರಿಂದ ಅಸಹಕಾರ ಚಳವಳಿಗಳು ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿದೆ. ಈ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ಸೇನಾ ಆಡಳಿತವು ದೇಶದಲ್ಲಿ ಭದ್ರತಾ ಪಡೆಯನ್ನು ನಿಯೋಜನೆ ಮಾಡಿದೆ.
ಇನ್ನು ಮಾಂಡಲೆ ನಗರದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ರ್ಯಾಲಿಯನ್ನು ಚದುರಿಸುವ ನಿಟ್ಟಿನಲ್ಲಿ ಸೇನೆಯು ರಬ್ಬರ್ ಬುಲೆಟ್ಗಳನ್ನು ಬಳಸಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಯಾಂಗೂನ್ನಲ್ಲೂ ಕೂಡಾ ಮಂಗಳವಾರ ಭಾರೀ ಪ್ರಮಾಣದ ಪ್ರತಿಭಟನಾಕಾರರು ಸೇರಿದ್ದಾರೆ.