ಲಂಡನ್, ಫೆ.18 (DaijiworldNews/PY): ಇತ್ತೀಚೆಗಷ್ಟೇ ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಮಣಿಪಾಲ ಮೂಲದ ಮಣಿಪಾಲ ಎಂಐಟಿಯ ಹಳೆ ವಿದ್ಯಾರ್ಥಿ ರಶ್ಮಿ ಸಾಮಂತ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆಕ್ಸ್ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಆಗಿದ್ದ ರಶ್ಮಿ ಸಾಮಂತ್ ಅವರು, ಈ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಜನಾಂಗೀಯ ಹಾಗೂ ಸಂವೇದನಾರಹಿತವಾದ ಹೇಳಿಕೆಗಳಿಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ರಶ್ಮಿ ಸಾಮಂತ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಶ್ಮಿ ಸಾಮಂತ್ ಅವರು ರಾಜೀನಾಮೆ ನೀಡಿದ ಹಿನ್ನೆಲೆ ಅಧ್ಯಕ್ಷ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.