ವಾಷಿಂಗ್ಟನ್, ಫೆ.19 (DaijiworldNews/PY): "ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ನೇತೃತ್ವದ ಸರ್ಕಾರವು, ಇರಾನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ವಿಶ್ವದ ಪ್ರಮುಖ ರಾಷ್ಟ್ರಗಳ ಹಾಗೂ ಇರಾನ್ ಜೊತೆ ರಾಜತಾಂತ್ರಿಕವಾಗಿ ಚರ್ಚೆ ನಡೆಸಲು ಸಿದ್ದವಿದೆ" ಎಂದು ಅಮೇರಿಕಾ ತಿಳಿಸಿದೆ.
2018ರಲ್ಲಿ ಡೊನಾಲ್ಡ್ ಟ್ರಂಪ್ ಅವರು 2015ರ ಪರಮಾಣ ಒಪ್ಪಂದದಿಂದ ಹೊರ ಬಂದಿದ್ದರು. ಈಗ ಅಮೇರಿಕಾವು ಜೋ ಬಿಡೆನ್ ಅವರ ಒಪ್ಪಂದದಲ್ಲಿ ಪುನಃ ಸೇರ್ಪಡೆಯಾಗಲು ಯತ್ನಿಸುತ್ತಿದೆ.
"ಇರಾನ್ ಒಂದುವೇಳೆ ಈ ಒಪ್ಪಂದಕ್ಕೆ ಮರಳಿದಲ್ಲಿ, ಅಮೇರಿಕಾ ಕೂಡಾ ಈ ಒಪ್ಪಂದಕ್ಕೆ ಮರು ಸೇರ್ಪಡೆಯಾಗಲು ಸಿದ್ದವಿದೆ ಎಂದು ಜೋ ಬಿಡೆನ್ ಹಾಗೂ ಅವರ ಸಲಹೆಗಾರರು" ಹೇಳಿದ್ದಾರೆ.
"ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ದೇಶಗಳು ಸೇರಿದಂತೆ ಇರಾನ್ ಹಾಗೂ ಜರ್ಮನಿ ಇರಾನ್ ಪರಮಾಣು ಕಾರ್ಯಕ್ರಮದ ವಿಚಾರದ ಬಗ್ಗೆ ರಾಜತಾಂತ್ರಿಕ ಮಾರ್ಗದ ಬಗ್ಗೆ ಚರ್ಚೆ ನಡೆಸಲು ಪುನಃ ಮಾತುಕತೆ ನಡೆಸಬೇಕು ಎನ್ನುವ ಐರೋಪ್ಯ ಸಮುದಾಯದ ಉನ್ನತ ಪ್ರತಿನಿಧಿಗಳು ಕಳುಹಿಸಿರುವ ಆಹ್ವಾನವನ್ನು ಅಮೇರಿಕಾವು ಸ್ವೀಕರಿಸುತ್ತದೆ" ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.