ವಾಷಿಂಗ್ಟನ್, ಫೆ.20 (DaijiworldNews/MB) : ತೂಕ ಕಡಿಮೆ ಮಾಡಲಿಚ್ಛಿಸುವ ಹಾಗೂ ಇತರೆ ವ್ಯಾಯಾಮ ಮಾಡುವವರಿಗೆ ಪೂರಕವಾಗಿ ನೀಡುವ ಜನಪ್ರಿಯ ಪೋಷಕಾಂಶಯುಕ್ತ ಪುಡಿಯನ್ನು, ಅದರಲ್ಲಿರುವ ಮೂಲ ಪದಾರ್ಥಗಳನ್ನು ಮರೆಮಾಚಿ ಮೋಸದಿಂದ ಮಾರಾಟ ಮಾಡಿದ ಆರೋಪದಲ್ಲಿ ಕಂಪನಿಯೊಂದರ, ಭಾರತೀಯ ಮೂಲದ ಮಾಜಿ ಕಾರ್ಯ ನಿರ್ವಾಹಕರೊಬ್ಬರಿಗೆ ಅಮೇರಿಕಾದ ನ್ಯಾಯಾಲಯವು ಜೈಲು ಶಿಕ್ಷೆ ನೀಡಿದೆ.
ಭಾರತೀಯ ಮೂಲದ ಎಸ್.ಕೆ.ಲಾಬೊರೇಟರಿಸ್ನ ಮಾಜಿ ಉಪಾಧ್ಯಕ್ಷ ಸಿತೇಶ್ ಪಟೇಲ್ ಅವರು ಈ ಪ್ರಕರಣದಲ್ಲಿ ಅಪರಾಧಿ ಎಂದು ಅಮೇರಿಕಾದ ಟೆಕ್ಸಾಸ್ನಲ್ಲಿರುವ ಫೆಡರಲ್ ನ್ಯಾಯಾಲಯ ತೀರ್ಪು ನೀಡಿದ್ದುಅವರಿಗೆ 41 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಪಟೇಲ್ ಅವರು, ಕ್ಯಾಲಿಫೋರ್ನಿಯಾದ ಇರ್ವಿನ್ ನಿವಾಸಿಯಾಗಿದ್ದು ತೂಕ ಇಳಿಸುವ ಹಾಗೂ ಇತರೆ ವ್ಯಾಯಾಮ ಮಾಡುವವರಿಗೆ ಅಗತ್ಯವಾದ ಜನಪ್ರಿಯ ಪೋಷಕಾಂಶ ಪುಡಿಗಳಾದ ಜ್ಯಾಕ್ 3 ಡಿ ಮತ್ತು ಆಕ್ಸಿಲೈಟ್ ಪ್ರೊಗಳನ್ನು ರೂಪಿಸುವಲ್ಲಿ ತೊಡಗಿದ್ದರು.