ವಾಷಿಂಗ್ಟನ್, ಫೆ.21 (DaijiworldNews/PY): ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ಮುಂದಿನ ವಾರ ನಡೆಯಲಿರುವ ಕನ್ಸರ್ವೆಟಿವ್ ಸಮ್ಮೇಳನದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾಷಣ ಮಾಡುವ ನಿರೀಕ್ಷೆ ಇದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಕನ್ಸರ್ವೆಟಿವ್ ಸಮ್ಮೇಳನವು ಫೆ.25ರಿಂದ 28ರವರೆಗೆ ನಡೆಯಲಿದ್ದು, ಸಮ್ಮೇಳನದ ಕೊನೆಯ ದಿನ ಡೊನಾಲ್ಡ್ ಟ್ರಂಪ್ ಅವರು ಮಾತನಾಡಲಿದ್ದು, ಇದು ಅವರ ಮೊದಲ ಸಾರ್ವಜನಿಕ ಭಾಷಣವಾಗಿದೆ.
ಸಮ್ಮೇಳದಲ್ಲಿ ಡೊನಾಲ್ಡ್ ಟ್ರಂಪ್ ಅವರು, ಪಕ್ಷದ ಭವಿಷ್ಯ ಸೇರಿದಂತೆ ಅಮೇರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಅವರ ವಲಸೆ ನೀತಿಗಳ ವಿಚಾರದ ಬಗ್ಗೆ ಮಾತನಾಡಲಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಮೂಲಗಳು ದೃಢಪಡಿಸಿವೆ.