ವಿಶ್ವಸಂಸ್ಥೆ, ಫೆ.21 (DaijiworldNews/PY): ಕೊರೊನಾ ವಿರುದ್ದ ಜಾಗತಿಕ ಹೋರಾಟದಲ್ಲಿ ಭಾರತದ ನಾಯಕತ್ವ ಹಾಗೂ ಜಾಗತಿಕ ಮಾರುಕಟ್ಟೆಗೆ ಅವಶ್ಯಕವಾದ ಕೊರೊನಾ ಲಸಿಕೆಗಳ ಪೂರೈಕೆಗಾಗಿ ಭಾರತ ಮಾಡುತ್ತಿರುವ ಪ್ರಯತ್ನಕ್ಕೆ ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೊನಿಯೊ ಗುಟೆರಸ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವಸಂಸ್ಥೆಯ ಭಾರತದ ರಾಯಭಾರಿ ಟಿ.ಎಸ್ ತಿರುಮೂರ್ತಿ ಅವರು, "ಕೊರೊನಾ ಲಸಿಕೆಯ 200,000 ಡೋಸ್ ಅನ್ನು ವಿಶ್ವಸಂಸ್ಥೆಗೆ ನೀಡುರುವ ಭಾರತದ ಕಾರ್ಯವನ್ನು ವಿಶ್ವಸಂಸ್ಥೆ ಮೆಚ್ಚಿದೆ. ಈ ವಿಚಾರದ ಬಗ್ಗೆ ಫೆ.7ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರಿಗೆ ಆಂಟೊನಿಯೊ ಗುಟೆರಸ್ ಅವರು ಪತ್ರ ಬರೆದಿದ್ದು, ವೈಯುಕ್ತಿಕವಾಗಿ ಕೃತಜ್ಞತೆ ಸಲ್ಲಿಸಿದ್ದರು" ಎಂದು ಹೇಳಿದ್ದಾರೆ.
"ಕೊರೊನಾ ಸಂದರ್ಭ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಆ ವೇಳೆಯಲ್ಲಿ ಭಾರತ 150ಕ್ಕೂ ಅಧಿಕ ದೇಶಗಳಿಗೆ ಪಿಪಿಇ ಕಿಟ್ಗಳು ಸೇರಿದಂತೆ ಅತ್ಯಗತ್ಯವಾದ ಔಷಧಿಗಳು, ವೆಂಟಿಲೇಟರ್ಗಳನ್ನು ಪೂರೈಕೆ ಮಾಡಿದೆ" ಎಂದು ಗುಟೆರಸ್ ಅವರು ತಿಳಿಸಿದ್ದಾರೆ ಎಂದು ಟಿ.ಎಸ್ ತಿರುಮೂರ್ತಿ ಅವರು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಇತ್ತೀಚೆಗೆ ಭಾರತವು ವಿಶ್ವಸಂಸ್ಥೆಗೆ ಕೊರೊನಾ ಲಸಿಕೆಯ 200,000 ಡೋಸ್ ಅನ್ನು ಕೊಡುಗೆಯಾಗಿ ನೀಡಿತ್ತು.