ಟೆಹರಾನ್, ಫೆ.23 (DaijiworldNews/PY): "ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲಿಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್ ಕೆಲ ನಿರ್ಬಂಧಗಳನ್ನು ವಿಧಿಸಿದೆ" ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಐರೋಪ್ಯ ದೇಶಗಳು ಹಾಗೂ ಅಮೇರಿಕಾ ತನ್ನ ವಿರುದ್ದವಾಗಿ ಜಾರಿ ಮಾಡಿರುವ ಆರ್ಥಿಕ ನಿರ್ಬಂಧಗಳನ್ನು ತೆರವು ಮಾಡುವಂತೆ ಒತ್ತಡ ಹೇರುವ ತಂತ್ರದ ಭಾಗವಾಗಿ ಇರಾನ್ ಈ ರಿಯಾಗಿ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
"ಇಂಟರ್ನ್ಯಾಷನಲ್ ಅಟೋಮಿಕ್ ಎನರ್ಜಿ ಏಜೆನ್ಸಿಯ ಪರಿಶೀಲನಾ ತಂಡವು ಅಣ್ವಸ್ತ್ರ ಪರಿಶೀಲನೆಗೆ ಆಗಮಿಸಲಿದ್ದು, ತಂಡಕ್ಕೆ ಸೀಮಿತ ಅನುಮತಿ ಕಲ್ಪಿಸುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಸೀಮಿತ ಅನುಮತಿಯ ಸ್ವರೂಪ ಯಾವ ರೀತಿ ಇರಲಿದೆ ಎನ್ನುವ ವಿಚಾರದ ಬಗ್ಗೆ ಮಾಹಿತಿ ಇಲ್ಲ" ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಐಎಇಎಯೊಂದಿಗೆ ಅಣ್ವಸ್ತ್ರ ಪರಿಶೀಲನೆ ನಡೆಸುವ ಬಗ್ಗೆ ತಾನು ಮಾಡಿಕೊಂಡಿರುವ ಒಪ್ಪಂದವನ್ನು ರದ್ದುಪಡಿಸುವುದಾಗಿಯೂ ಇರಾಬ್ ತಿಳಿಸಿದೆ.