ಸ್ಯಾನ್ ಡಿಯಾಗೊ, ಫೆ. 25 (DaijiworldNews/HR): ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿದ್ದಾಗ ಗ್ರೀನ್ ಕಾರ್ಡ್ ವಿತರಣೆ ಹಾಗೂ ವಲಸೆ ನೀತಿಗೆ ಸಂಬಂಧಿಸಿದಂತೆ ಹೊರಡಿಸಿದ್ದ ಆದೇಶವನ್ನು ಅಧ್ಯಕ್ಷ ಜೋ ಬಿಡೆನ್ ರದ್ದು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಡೆನ್ ಆಡಳಿತದ ಈ ಕ್ರಮದಿಂದ, ಎಚ್–1ಬಿ ವೀಸಾ ಪಡೆದು ಅಮೇರಿಕಾದಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಅನುಕೂಲವಾಗಲಿದ್ದು, ಐಟಿ ಕ್ಷೇತ್ರದ ಅಮೇರಿಕಾದ ಕಂಪನಿಗಳಲ್ಲಿ ಭಾರತೀಯರು ಭಾರಿ ಸಂಖ್ಯೆಯಲ್ಲಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ಬಿಡೆನ್, "ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಅಮೇರಿಕಾದ ಅಭಿವೃದ್ಧಿಗೆ ತಡೆಯೊಡ್ಡುತ್ತಿತ್ತು" ಎಂದರು.
ಇನ್ನು "ಅಮೇರಿಕಾದಲ್ಲಿ ನೆಲೆಸಿರುವ ವಿವಿಧ ದೇಶಗಳ ಜನರಿಗೆ, ಅವರ ಕುಟುಂಬದ ಸದಸ್ಯರಿಗೆ ತೊಂದರೆಯಾಗುವುದು. ಜಗತ್ತಿನ ವಿವಿಧ ದೇಶಗಳಿಂದ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವ ಅಮೇರಿಕಾದ ಉದ್ಯಮಗಳಿಗೆ ಹಾನಿಯಾಗುವುದು" ಎಂದು ಹೇಳಿದ್ದಾರೆ.