ಬ್ರೆಸಿಲಿಯಾ, ಫೆ.26 (DaijiworldNews/HR): ಭಾರತ್ ಬಯೋಟೆಕ್ನಿಂದ 2 ಕೋಟಿ ಕೊರೊನಾ ಲಸಿಕೆ ಖರೀದಿಗೆ ಬ್ರೆಜಿಲ್ನ ಆರೋಗ್ಯ ಸಚಿವಾಲಯ ಒಪ್ಪಂದ ಮಾಡಿಕೊಂಡಿದ್ದು, ಮಾರ್ಚ್ -ಮೇ ಅವಧಿಯಲ್ಲಿ ಲಸಿಕೆ ಪೂರೈಕೆಯಾಗಲಿದೆ ಎಂದು ತಿಳಿದು ಬಂದಿದೆ.
ಮೊದಲ ಹಂತದಲ್ಲಿ ಮಾರ್ಚ್ನಲ್ಲಿ 80 ಲಕ್ಷ ಡೋಸ್ ಲಸಿಕೆ ದೇಶಕ್ಕೆ ಪೂರೈಕೆಯಾಗಲಿದೆ ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ತಿಳಿಸಿದೆ.
ಇನ್ನು ಕೊರೊನಾ ಲಸಿಕೆಗಳ ಖರೀದಿ ವೇಗ ಹೆಚ್ಚಿಸಲು ಮತ್ತು ಕೊರೊನಾದ ಎರಡನೇ ಅಲೆಯನ್ನು ನಿರ್ವಹಿಸುವ ಸಲುವಾಗಿ ಬಿಡ್ಡಿಂಗ್ ಪ್ರಕ್ರಿಯೆಗೆ ಸಂಬಂಧಿಸಿ ಹೊಸ ನಿಯಮಗಳನ್ನು ಕಳೆದ ವಾರ ಪ್ರಕಟಿಸಲಾಗಿತ್ತು ಎಂದು ಸಚಿವಾಲಯ ಹೇಳಿದೆ.