ವಾಷಿಂಗ್ಟನ್, ಫೆ.26 (DaijiworldNews/PY): "ಕೊರೊನಾ ಪಿಡುಗನ್ನು ನಿಯಂತ್ರಣ ಮಾಡುವುದೇ ನನ್ನ ಮೊದಲ ಆದ್ಯತೆ" ಎಂದು ಅಮೇರಿಕಾದ ಸರ್ಜನ್ ಜನರಲ್ ಹುದ್ದೆಗೆ ನಾಮನಿರ್ದೇಶನಗೊಂಡಿರುವ, ಭಾರತೀಯ ಅಮೇರಿಕನ್ ವೈದ್ಯ ಡಾ.ವಿವೇಕಮೂರ್ತಿ ತಿಳಿಸಿದ್ದಾರೆ.
"ಕೊರೊನಾ ನಿಯಂತ್ರಿಸುವುದು ವೈಯುಕ್ತಿಕವಾಗಿಯೂ ನನಗೆ ಬಹಳ ಪ್ರಾಮುಖ್ಯವಾದ ವಿಚಾರವಾಗಿದೆ. ಕೊರೊನಾದಿಂದಾಗಿ ನಾನು ನನ್ನ ಕುಟುಂವದ ಏಳು ಮಂದಿಯನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಅದರ ನೋವು ಏನೆಂದು ನನಗೆ ಗೊತ್ತಿದೆ" ಎಂದಿದ್ದಾರೆ.
"ದೇಶವನ್ನು ಕೊರೊನಾ ಹಲವು ರೀತಿಯಲ್ಲಿ ಬಾಧಿಸುತ್ತಿದೆ. ಕೆಲ ಮಂದಿ ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಅನೇಕ ಮಂದಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಹಾಗಾಗಿ ಸರ್ಜನ್ ಜನರಲ್ ಆಗಿ ನಾಮನಿರ್ದೇಶನವಾದಲ್ಲಿ, ಕೊರೊನಾ ಸೋಂಕಿನ ನಿರ್ಮೂಲನೇ ನನ್ನ ಮೊದಲ ಆದ್ಯತೆ" ಎಂದು ತಿಳಿಸಿದ್ದಾರೆ.