ವಾಷಿಂಗ್ಟನ್, ಫೆ.27 (DaijiworldNews/HR): ಚೀನಾ ದೇಶವು ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವುದಾಗಿ ಆರೋಪಿಸಿರುವ ರಿಪಬ್ಲಿಕನ್ ನಾಯಕರು, ಬೀಜಿಂಗ್ನಲ್ಲಿ ನಡೆಯಲಿರುವ 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಅಮೇರಿಕಾ ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿಕ್ಕಿ ಹ್ಯಾಲೆ
ಸರ್ಕಾರವು 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು ಮತ್ತು ಈ ಒಲಿಂಪಿಕ್ಸ್ ಅನ್ನು ಬೇರೆ ಸ್ಥಳದಲ್ಲಿ ಆಯೋಜಿಸುವಂತೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಮನವಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಕುರಿತಂತೆ ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ಶ್ವೇತಭವನ ತಿಳಿಸಿದೆ.
ಚೀನಾ ಅನೇಕ ಬಾರಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದು, ಈ ಒಲಿಂಪಿಕ್ಸ್ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಯ ಕೃತ್ಯಗಳನ್ನು ಮುಚ್ಚಲು ಚೀನಾ ಪ್ರಯತ್ನಿಸುತ್ತಿದೆ. ಹಾಗಾಗಿ ಜೋ ಬಿಡೆನ್ ನೇತೃತ್ವದ ಸರ್ಕಾರ 2022ನೇ ಚಳಿಗಾಲದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಬೇಕು್ ಎಂದು ವಿಶ್ವಸಂಸ್ಥೆಗೆ ಅಮೇರಿಕಾದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಈ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಆಗ್ರಹಿಸಿದ್ದಾರೆ.