ದುಬೈ, ಫೆ.28 (DaijiworldNews/HR): "ಯೆಮೆನ್ನ ಹೂಥಿ ಬಂಡುಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮೇಲೆ ನಡೆಸಿದ ಕ್ಷಿಪಣಿ ದಾಳಿ ಮತ್ತು ದಕ್ಷಿಣ ಪ್ರಾಂತ್ಯದ ಜಿಝಾನ್ ಗುರಿಯಾಗಿಸಿಕೊಂಡು ನಡೆಸಲಾದ ಡ್ರೋನ್ ದಾಳಿಯನ್ನು ಕೂಡ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ" ಎಂದು ಸೌದಿ ಅರೇಬಿಯಾ ಹೇಳಿದೆ.
ಸಾಂಧರ್ಭಿಕ ಚಿತ್ರ
ಕ್ಷಿಪಣಿ ದಾಳಿ ಮತ್ತು ಡ್ರೋನ್ ದಾಳಿಗಳಲ್ಲಿ ಯಾವುದೇ ಪ್ರಾಣ ಮತ್ತು ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆದರೆ ಈವರೆಗೂ ಹೂಥಿ ಬಂಡುಕೋರರು ಈ ದಾಳಿಯ ಹೊಣೆಯನ್ನು ಹೊತ್ತಿಲ್ಲ ಎನ್ನಲಾಗಿದ್ದು, ಈ ಕುರಿತು ಯಾವುದೇ ಪ್ರತಿಕ್ರಿಯೆ ಕೂಡ ನೀಡಿಲ್ಲ.
ಇನ್ನು ಗಾಳಿಯಲ್ಲಿ ಕ್ಷಿಪಣಿ ಸ್ಫೋಟಗೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.