ಯಾಂಗೂನ್, ಫೆ.28 (DaijiworldNews/HR): ಮಿಲಿಟರಿ ಆಡಳಿತವನ್ನು ವಿರೋಧಿಸಿ ಮ್ಯಾನ್ಮಾರ್ನ ಯಾಂಗೂನ್ನಲ್ಲಿ ರವಿವಾರ ಕೂಡ ಪ್ರತಿಭಟನೆ ಮುಂದುವರಿದಿದ್ದು, ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದಾರೆ.
ರವಿವಾರ ಬೆಳಿಗ್ಗೆ ಹ್ಲೆಡಾನ್ನ ಯಾಂಗೂನ್ ನಗರದಲ್ಲಿ ಪ್ರತಿಭಟನೆ ಆರಂಭವಾಗಿದ್ದು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಈ ಪ್ರತಿಭಟನೆ ಭಾಗಿಯಾಗಿದ್ದರು. ಈ ವೇಳೆ ಅನೇಕ ಪ್ರತಿಭಟನಕಾರರನ್ನು ಬಂಧಿಸಲಾಗಿದೆ.
ಇನ್ನು ಮಿಲಿಟರಿ ಆಡಳಿತ ವಿರೋಧಿಸಿ ಮ್ಯಾನ್ಮಾರ್ನಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದು, ದಿನ ಕಳೆಯುತ್ತಿದ್ದಂತೆ ಪ್ರತಿಭಟನಕಾರರ ಮೇಲೆ ಸೇನೆ ನಡೆಸುತ್ತಿರುವ ಹಿಂಸಾಚಾರವೂ ಹೆಚ್ಚಾಗಿವೆ ಎನ್ನಲಾಗಿದೆ.