ಕರಾಚಿ, ಫೆ.28 (DaijiworldNews/HR): ಪಾಕಿಸ್ತಾನದ ಜಲ ಗಡಿ ಪ್ರವೇಶಿಸಿದ ಆರೋಪದ ಮೇಲೆ 17 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಈ ಕುರಿತು ಭದ್ರತಾ ಪಡೆಯ ವಕ್ತಾರರು ಮಾಹಿತಿ ನೀಡಿದ್ದು, "ಮೂರು ಬೋಟ್ಗಳನ್ನೂ ವಶಕ್ಕೆ ಪಡೆಯಲಾಗಿದ್ದು, ಬಂಧಿತ ಮೀನುಗಾರರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ, ಸ್ಥಳೀಯ ಬಂದರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ" ಎಂದರು.
ಮೀನುಗಾರರು ಪಾಕ್ ಜಲ ಗಡಿ ಪ್ರವೇಶಿಸುತ್ತಿದ್ದಂತೆ ಅವರಿಗೆ ದೂರ ಹೋಗುವಂತೆ ಎಚ್ಚರಿಕೆ ನೀಡಲಾಗಿತ್ತು. ಆದರೆ ಅವರು ಕಿವಿಗೊಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಭಾರತೀಯ ಮೀನುಗಾರರನ್ನು ಕರಾಚಿಯ ಮಾಲಿರ್ ಅಥವಾ ಲಾಂಧಿ ಜೈಲಿಗೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.