ಯಾಂಗೂನ್, ಮಾ. 01(DaijiworldNews/HR): ಮ್ಯಾನ್ಮಾರ್ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ನಡೆಸಿದ ಗುಂಡಿನ ದಾಳಿಯಲ್ಲಿ 18 ಮಂದಿ ಮೃತಪಟ್ಟು, 30 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಾರ್ಯಾಲಯವು ತಿಳಿಸಿದೆ.
ಮಿಲಿಟರಿ ಆಡಳಿತವ ವಿರೋಧಿಸಿ ಮತ್ತು ಆಂಗ್ ಸಾನ್ ಸೂಕಿ ಅವರ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನಾಕಾರರು ರವಿವಾರದಂದು ಬೀದಿಗಿಳಿದಿದ್ದರು.
ಇನ್ನು ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಅನೇಕ ಕಡೆಗಳಲ್ಲಿ ಅಶ್ರುವಾಯು ಹಾಗೂ ಜಲ ಫಿರಂಗಿಗಳನ್ನು ಕೂಡ ಪ್ರಯೋಗಿಸಲಾಗಿದೆ ಎಂದು ತಿಳಿದು ಬಂದಿದೆ.
"ಶಾಂತಿಯುತ ಪ್ರತಿಭಟನೆಯ ವಿರುದ್ಧ ಮಿಲಿಟರಿ ಬಲಪ್ರಯೋಗವನ್ನು ತಕ್ಷಣವೇ ನಿಲ್ಲಿಸಬೇಕು" ಎಂದು ವಕ್ತಾರ ರವೀನಾ ಶಮ್ದಾಸಾನಿ ಮನವಿ ಮಾಡಿದ್ದಾರೆ.