ಸೌದಿ ಅರೇಬಿಯಾ, ಮಾ 01 (DaijiworldNews/MS): ಸೌದಿ ಅರೇಬಿಯಾದ ತೈಫ್ನಲ್ಲಿ ಮಿನಿ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕೇರಳ ಮೂಲದ ಇಬ್ಬರು ನರ್ಸ್ ದಾರುಣವಾಗಿ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಕೇರಳದ ಕೊಲ್ಲಂ ನಿವಾಸಿ ಸುಬಿ (33) ಮತ್ತು ವೈಕೊಂ ವಂಚಿಯೂರ್ ನಿವಾಸಿ ಅಖಿಲಾ (29) ಎಂದು ಗುರುತಿಸಲಾಗಿದೆ.
ಕೇರಳದ ಇನ್ನಿಬ್ಬರು ನರ್ಸ್ಗಳಾದ ಆಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ತೈಫ್ನ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ರಿಯಾದ್ನಲ್ಲಿ ತಮ್ಮ ಕ್ವಾರಂಟೈನ್ ಪೂರ್ಣಗೊಳಿಸಿ ಜೆದ್ದಾದಲ್ಲಿರುವ ವಸತಿ ನಿಲಯಕ್ಕೆ ಮರಳುವಾಗ ಅಪಘಾತ ನಡೆದಿದೆ ಎಂದು ವರದಿಯಾಗಿದೆ.
ರಿಯಾದ್ನಿಂದ ಜೆದ್ದಾಗೆ ಪ್ರಯಾಣ ಬೆಳೆಸಿದ್ದ ಮಿನಿಬಸ್ ರಸ್ತೆ ಪಕ್ಕದ ಕಂದಕಕ್ಕೆ ಉರುಳಿದ್ದು, ಚಾಲಕ ನಿದ್ರೆಗೆ ಜಾರಿದ್ದರ ಪರಿಣಾಮ ದುರ್ಘಟನೆ ನಡೆದಿದೆ ಎನ್ನಲಾಗಿದೆ.