ವಾಷಿಂಗ್ಟನ್, ಮಾ.02 (DaijiworldNews/HR): "ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇರಿದ್ದ ಎಚ್-1ಬಿ ವೀಸಾ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವ ಕುರಿತು ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ" ಎಂದು ಜೋ ಬಿಡನ್ ಆಡಳಿತ ಹೇಳಿದೆ.
ಈ ಕುರಿತು ಮಾತನಾಡಿರುವ ಹೋಂಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಅಲೆಜಾಂಡ್ರೊ ಮಯೋಕಾರ್ಸ್, "ಜನಾಂಗಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯುವುದು ಸದ್ಯ ನಮ್ಮ ಪ್ರಮುಖ ಉದ್ಧೇಶವಾಗಿದೆ" ಎಂದರು.
ಇನ್ನು ಅಮೇರಿಕಾದಲ್ಲಿ ನಿರುದ್ಯೋಗ ಹೆಚ್ಚಿದ್ದು, ಇಂತಹ ಸಂದರ್ಭದಲ್ಲಿ ಹೆಚ್ಚಿನ ವಿದೇಶಿ ಕೆಲಸಗಾರರಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ, ಡೊನಾಲ್ಡ್ ಟ್ರಂಪ್ ಸರ್ಕಾರವು ಎಚ್-1ಬಿ ವೀಸಾದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದ್ದು, ಅದು ಮಾರ್ಚ್ ತಿಂಗಳ 31ರ ತನಕ ಜಾರಿಯಲಿರಲಿದೆ.