ಅಮೇರಿಕಾ, ಮಾ 02 (DaijiworldNews/MS): ಕೇವಲ 10 ಸೆಕೆಂಡ್ ವೀಡಿಯೊದಿಂದ ಒಬ್ಬ ವ್ಯಕ್ತಿ ಎಷ್ಟು ರೂಪಾಯಿಗಳನ್ನು ಗಳಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಆದರೆ ಇಲ್ಲೊಬ್ಬ ವ್ಯಕ್ತಿಯೂ 10 ಸೆಕುಂಡ್ ಗಳ ವಿಡಿಯೋದಿಂದ 48.42 ಕೋಟಿ ರೂ. ಗಳಿಸಿದ್ದಾರೆ.
ಅಮೆರಿಕದ ಮಿಯಾಮಿಯಲ್ಲಿ ವಾಸಿಸುವ ಕಲಾ ಸಂಗ್ರಾಹಕ ಪ್ಯಾಬ್ಲೊ ರೊಡ್ರಿಗಸ್-ಫ್ರೇಲ್ 10 ಸೆಕೆಂಡುಗಳ ವೀಡಿಯೊ ಕಲಾಕೃತಿಗಾಗಿ ಮಾರಾಟ ಮಾಡಿ ಕೋಟಿ ರೂ.ಗಳನ್ನು ತನ್ನದಾಗಿಸಿದ್ದಾರೆ.
ಯಾವ ವೀಡಿಯೊ ?
ಅಮೆರಿಕದ ಮಿಯಾಮಿಯಲ್ಲಿ ವಾಸಿಸುವ ಡಿಜಿಟಲ್ ಕಲಾವಿದ ಬೀಪಲ್ (ಈತನ ನಿಜವಾದ ಹೆಸರು ಮೈಕ್ ವಿಂಕೆಲ್ಮನ್) ಎಂಬಾತ ಅಕ್ಟೋಬರ್ 2020 ರಚಿಸಿರುವ 10 ಸೆಕೆಂಡುಗಳ ಕಲಾತ್ಮಕ ವೀಡಿಯೊ ಆನ್ಲೈನ್ನಲ್ಲಿ ಉಚಿತವಾಗಿ ವೀಕ್ಷಿಸಬಹುದಾದಗಿದ್ದು, ಇದು ಬ್ಲಾಕ್ ಚೈನ್ ಧೃಡಿಕರೀಸಲ್ಪಟ್ಟಿತ್ತು. ಬ್ಲಾಕ್ ಚೈನ್ ಎಂದರೆ ಹೊಸ ಪ್ರಕಾರ ಡಿಜಿಟಲ್ ಸ್ವತ್ತು ಆಗಿದ್ದು, ಇದನ್ನು ಯಾರು ಹೊಂದಿದ್ದಾರೆ ಮತ್ತು ಅದು ಮೂಲ ಕೃತಿ ಎಂದು ಪ್ರಮಾಣೀಕರಿಸಲು ಡಿಜಿಟಲ್ ಸಹಿಯಾಗಿ ಕಾರ್ಯನಿರ್ವಹಿಸುತ್ತದೆ.
ಈ ಕಲಾತ್ಮಕ ವೀಡಿಯೊದಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಂತೆ ಕಾಣುವ ವ್ಯಕ್ತಿ ನೆಲದ ಮೇಲೆ ಕುಸಿದಿರುವುದನ್ನು ಕಾಣಬಹುದು. ಅಲ್ಲದೆ ದೇಹದ ತುಂಬಾ ಸಾಕಷ್ಟು ಹಚ್ಚೆ ಹಾಕಿಸಿಕೊಂಡಿದ್ದಾರೆ. ಘೋಷಣೆಗಳನ್ನು ಬರೆದಿದ್ದಾರೆ. ಅವರ ಟ್ವಿಟ್ಟರ್ ಹಕ್ಕಿ ಕೂಡ ಎದ್ದು ಕುಳಿತಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಈ ವೀಡಿಯೊವನ್ನು ಹಂಚಿಕೊಂಡಿದೆ.
ಈ ವೀಡಿಯೊಯನ್ನು ಬ್ಲಾಕ್ಚೇನ್ ಎಂಬ ಸಂಸ್ಥೆ ಪ್ರಮಾಣೀಕರಿಸಿದೆ. ಇದನ್ನು ಕ್ರಿಪ್ಟೋಗ್ರಾಫಿಕ್ ಟೋಕನ್ (ಎನ್ಎಫ್ಟಿ) ಎಂದು ಕರೆಯಲಾಗುತ್ತದೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ಎನ್ಎಫ್ಟಿ ಸುದ್ದಿಯಲ್ಲಿದೆ. ಕೊರೊನಾ ಸಾಂಕ್ರಮಿಕ ಬಳಿಕ ಹೆಚ್ಚು ಜನರು ಇದರಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇದನ್ನು ಡಿಜಿಟಲ್ ಆಸ್ತಿ ಎನ್ನಬಹುದಾಗಿದೆ. ಏಕೆಂದರೆ ಎನ್ಎಫ್ಟಿ ಡಿಜಿಟಲ್ ಪ್ಲಾಟ್ಫಾರ್ಮ್ನಲ್ಲಿ ಉಳಿಯುತ್ತದೆ. ಯಾರಾದರೂ ಇಷ್ಟಪಟ್ಟರೆ, ಅದು ಕೋಟ್ಯಂತರ ರೂಪಾಯಿಗಳನ್ನು ಪಡೆಯುತ್ತದೆ. ಬ್ಲಾಕ್ಚೈನ್ ತಂತ್ರಜ್ಞಾನವು ಅಂತಹ ವೀಡಿಯೊಗಳ ಆನ್ಲೈನ್ ನಕಲು ಮಾಡಲು ಅನುಮತಿಸುವುದಿಲ್ಲ.
ಡಿಜಿಟಲ್ ಕಲಾವಿದ ಬೀಪಲ್ ಅವರ ಕೆಲಸದಿಂದ ಪ್ರಭಾವಿತರಾದ , ಕಲಾ ಸಂಗ್ರಾಹಕ ಪ್ಯಾಬ್ಲೊ ರೊಡ್ರಿಗಸ್-ಫ್ರೇಲ್ 49.13 ಲಕ್ಷ ರೂಪಾಯಿ ಖರ್ಚು ಮಾಡಿ ಕಲಾಕೃತಿಯನ್ನು ಖರೀದಿಸಿ, ಕಳೆದ ವಾರ ಅವರು ಅದನ್ನು 48.42 ಕೋಟಿ ರೂ ಮಾರಾಟ ಮಾಡಿದ್ದಾರೆ.