ನವದೆಹಲಿ, ಮಾ.03 (DaijiworldNews/PY): "ಬ್ರಿಟನ್ ಸರ್ಕಾರವು, ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಿದ 1 ಕೋಟಿ ಆಸ್ಪ್ರಾಜೆನಿಕಾ ಕೊರೊನಾ ಡೋಸ್ಗಳನ್ನು ಪಡೆಯಲಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
"ಬ್ರಿಟನ್, 10 ಕೋಟಿ ಆಸ್ಟ್ರಾಜೆನಿಕಾ ಕೊರೊನಾ ಲಸಿಕಾ ಡೋಸ್ಗಳಿಗಾಗಿ ಮನವಿ ಮಾಡಿದೆ. ಇದರಲ್ಲಿ ಎಸ್ಐಐನಿಂದ ಒಂದು ಕೋಟಿ ಕೊರೊನಾ ಡೋಸ್ ಪೂರೈಕೆಯಾಗಲಿದೆ" ಎಂದು ಬ್ರಿಟನ್ ಸರ್ಕಾರದ ವಕ್ತಾರರು ಹೇಳಿದ್ದಾರೆ.
ಬ್ರಿಟನ್ನ ಮೆಡಿಸಿನ್ಸ್ ಹಾಗೂ ಹೆಲ್ತ್ಕೇರ್ ಉತ್ಪನ್ನಗಳ ನಿಯಂತ್ರಣ ಏಜೆನ್ಸಿ ಫೆಬ್ರವರಿ ತಿಂಗಳಿನಲ್ಲಿ ಎಸ್ಐಐನಲ್ಲಿ ಉತ್ಪಾದನಾ ಪ್ರಕ್ರಿಯೆಗಳನ್ನು ಪರಿಶೋಧನೆ ಮಾಡಿತ್ತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು.
ಏತನ್ಮಧ್ಯೆ ಕೊರೊನಾ ಲಸಿಕೆಗಳನ್ನು ಪಾಶ್ಚಿಮಾತ್ಯ ಶ್ರೀಮಂತ ದೇಶಗಳು ಬಡ ವೆಚ್ಚದಲ್ಲಿ ಸಂಗ್ರಹಿಸುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಎಸ್ಐಐನ ಆಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆಯನ್ನು ಬಾಂಗ್ಲಾದೇಶದಿಂದ ಬ್ರೆಜಿಲ್ವರೆಗಿನ ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳು ಅವಲಂಬಿಸಿದ್ದು, ಆದರೆ, ಇದೀಗ ಪಾಶ್ಚಿಮಾತ್ಯ ದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ ಕೋವಾಕ್ಸ್ ಅಭಿಯಾನಕ್ಕೂ ಎಸ್ಐಐ ಕೊರೊನಾ ಲಸಿಕೆಯನ್ನು ಪೂರೈಕೆ ಮಾಡುತ್ತಿದೆ.
"ಹೀಗಿದ್ದರೂ ಕೂಡಾ ಬಡ ದೇಶಗಳಿಗೆ ಕೊರೊನಾ ಲಸಿಕೆಗಳನ್ನು ನೀಡುವ ಬದ್ದತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ ಎನ್ನುವ ಎಸ್ಐಐ ವಾಗ್ದಾನದ ಮೇರೆಗೆ ಕೊರೊನಾ ಲಸಿಕೆ ಡೋಸ್ಗಳ ಸ್ವೀಕಾರಕ್ಕೆ ಸಿದ್ದವಾಗಿದ್ದೇವೆ" ಎಂದು ಬ್ರಿಟನ್ ಸರ್ಕಾರ ತಿಳಿಸಿದೆ.