ಸುಡಾನ್, ಮಾ 03 (DaijiworldNews/MS): ದಕ್ಷಿಣ ಸುಡಾನ್ನ ಜೊಂಗ್ಲೆ ರಾಜ್ಯದ ವಾಯುನೆಲೆಯಲ್ಲಿ ವಿಮಾನ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ಗಳು ಸೇರಿದಂತೆ ಕನಿಷ್ಠ ಹತ್ತು ಜನರು ಸಾವನ್ನಪ್ಪಿದ್ದಾರೆ ಎಂದು ವಿಮಾನಯಾನ ಸಂಸ್ಥೆ ನಿರ್ದೇಶಕ ಆಯಿ ಡುವಾಂಗ್ ಹಾಗೂ ರಾಜ್ಯಪಾಲ ಡೆನೆ ಜಾಕ್ ಚಾಗೋರ್ ತಿಳಿಸಿದ್ದಾರೆ.
ದಕ್ಷಿಣ ಸುಡಾನ್ ಸುಪ್ರೀಂ ಏರ್ ಲೈನ್ಸ್ ನ ವಿಮಾನ (ಎಚ್ಕೆ -4274) ಮಂಗಳವಾರ ಮಧ್ಯಾಹ್ನ ಪಿಯುರಿಯಲ್ಲಿನ ವಾಯುನೆಲೆಯಿಂದ ಜುಬಾಗೆ ಹಿಂದಿರುಗುವಾಗ ವಿಮಾನವು ಜೊಂಗ್ಲೆ ಸ್ಟೇಟ್ನ ಉರೋರ್ ಕೌಂಟಿ ಎಂಬ ಪ್ರದೇಶದಲ್ಲಿ ಸ್ಥಳೀಯ ಸಮಯ ಸಂಜೆ 7 ಗಂಟೆಗೆ ಅಪಘಾತಕ್ಕೀಡಾಗಿದೆ. ಪರಿಣಾಮ ಎಂಟು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್ಗಳು ಸಾವನ್ನಪ್ಪಿದ್ದಾರೆ.
ಈ ವಿಮಾನವು ದಕ್ಷಿಣ ಸುಡಾನ್ ಸುಪ್ರೀಂ ಏರ್ ಲೈನ್ಸ್ ನಿರ್ವಹಿಸುವ ವಾಣಿಜ್ಯ ವಿಮಾನವಾಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದು, ವಿಮಾನದಲ್ಲಿ ಎಷ್ಟು ಜನರು ಪ್ರಯಾಣಿಕರಿದ್ದರೆಂದು ಖಚಿತವಾಗಿಲ್ಲದಿದ್ದರೂ 24 ಜನ ಪ್ರಯಾಣಿಕರಿದ್ದರೂ ಎಂದು ಅಂದಾಜಿಸಲಾಗಿದೆ. ಮೃತಪಟ್ಟ ಪ್ರಯಾಣಿಕರ ಗುರುತುಗಳನ್ನು ಇನ್ನೂ ಪರಿಶೀಲಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.