ವಾಷಿಂಗ್ಟನ್, ಮಾ.04 (DaijiworldNews/PY): "ಭಾರತಕ್ಕೆ ಪ್ರಮುಖ ರಕ್ಷಣಾ ಸಾಧನಗಳ ಮಾರಾಟವು ಇದೀಗ 20 ಶತಕೋಟಿ ಯುಎಸ್ ಡಾಲರ್ಗಳಿಗೆ ತಲುಪಿದೆ. ಇದು ಭಾರತದ ಭದ್ರತೆ ಹಾಗೂ ಸಾರ್ವಭೌಮತ್ವಕ್ಕೆ ಅಮೇರಿಕಾದ ಬದ್ದತೆಯನ್ನು ಪ್ರದರ್ಶಿಸುತ್ತದೆ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಆಡಳಿತ ಹೇಳಿದೆ.
"ಅಮೇರಿಕಾವು ಈ ವರ್ಷಾಂತ್ಯದ ವೇಳೆಗೆ 2 ಬಿಲಿಯನ್ ಡಾಲರ್ನಷ್ಟು ರಕ್ಷಣಾ ಸಾಮಾಗ್ರಿಗಳ ಮಾರಾಟವನ್ನು ಅಧಿಕೃತಗೊಳಿಸಿದೆ. ಇದು ಭಾರತದ ಸಾರ್ವಭೌಮತೆ ಹಾಗೂ ಭದ್ರತೆಯನ್ನು ಪ್ರದರ್ಶಿಸುವ ಸುಧಾರಿತ ಯುಎಸ್ ರಕ್ಷಣಾ ವೇದಿಕೆಗಳ ಕೊಡುಗೆಯಾಗಿದೆ" ಎಂದು ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಅವರು ಹೇಳಿದ್ದಾರೆ.
"ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತ ಇತರ ಕೆಲ ದೇಶಗಳ ಜೊತೆ ನಡೆಸುತ್ತಿರುವ ರೀತಿ ಭಾರತ ದೇಶದೊಂದಿಗೆ ತನ್ನ ರಕ್ಷಣಾ ಒಪ್ಪಂದಗಳ ಬಗ್ಗೆ ಪರಿಶೀಲನೇ ಮಾಡುತ್ತಿದೆಯೇ ಡಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಾಳಿ ಉಳಿದ ಮಾರಾಟ ಅಥವಾ ಅವುಗಳ ಪರಿಶೀಲನಾ ಪ್ರಕ್ರಿಯೆಯ ವಿಚಾರದ ಬಗ್ಗೆ ನಿಮ್ಮ ಬಳಿ ನಾನು ಏನೂ ಹೇಳುವುದಿಲ್ಲ. ಆದರೆ, ಬಾಕಿ ಉಳಿದಿರುವ ವರ್ಗಾವಣೆಯ ಸ್ಥಿಯಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ನಿಮಗೆ ತಿಳಿಸಲು ಸಂತೋಷವಾಗುತ್ತದೆ" ಎಂದಿದ್ದಾರೆ.
ಅಮೇರಿಕಾದ ಭಾರತೀಯ ರಾಯಬಾರಿ ತಾರಂಜಿತ್ ಸಿಂಗ್ ಸಂಧು ಅವರು ಇತ್ತೀಚಿನ ಸಂದರ್ಶನದಲ್ಲಿ, "ಹಿಂದಿಗಿಂತಲೂ ದ್ವಿಪಕ್ಷೀಯ ಮಿಲಿಟರಿ ಹಾಗೂ ಭದ್ರತಾ ಸಂಬಂಧಗಳು ಈಗ ಸದೃಢವಾಗಿದೆ" ಎಂದು ಹೇಳಿದ್ದಾರೆ.
"ವಾಷಿಂಗ್ಟನ್ ಜೊತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕುವುದರಿಂದ ಉಭಯ ರಾಷ್ಟ್ರಗಳ ನಡುವೆ ಮಿಲಿಟರಿ ಸಹಕಾರ ಹೆಚ್ಚುತ್ತದೆ" ಎಂದು ತಿಳಿಸಿದ್ದಾರೆ.