ವಾಷಿಂಗ್ಟನ್, ಮಾ.05 (DaijiworldNews/HR): "ಅಮೇರಿಕಾದ ಆಡಳಿತದಲ್ಲಿ ಭಾರತ ಮೂಲದ ಅಮೇರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ಭಾರತ ಮೂಲದ ಅಮೇರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದಾರೆ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಶ್ಲಾಘಿಸಿದ್ದಾರೆ.
ಜೋ ಬಿಡೆನ್ ಅವರು ತಮ್ಮ ಆಡಳಿತದ ಪ್ರಮುಖ ಸ್ಥಾನಗಳಿಗೆ ಕನಿಷ್ಠ 55 ಭಾರತ ಮೂಲದ ಅಮೇರಿಕನ್ನರನ್ನು ನೇಮಕ ಮಾಡಿದ್ದು, ಅವರಲ್ಲಿ ಅರ್ಧದಷ್ಟು ಮಹಿಳೆಯರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶ್ವೇತಭವನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ನಾಸಾ ವಿಜ್ಞಾನಿಗಳೊಂದಿಗೆ ನಡೆದ ವರ್ಚ್ಯುವಲ್ ಸಂವಾದದಲ್ಲಿ ಈ ಕುರಿತು ಪ್ರಸ್ತಾಪಿಸಿರುವ ಅವರು, "ಭಾರತ ಮೂಲದ ಅಮೇರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದು, ನಾಸಾದ ಐತಿಹಾಸಿಕ ಪರ್ಸಿವಿಯರೆನ್ಸ್ ರೋವರ್ ನೌಕೆಯು ಯಶಸ್ವಿಯಾಗಿ ಮಂಗಳ ಗ್ರಹದಲ್ಲಿ ಇಳಿಯಲು ಭಾರತೀಯ ಮೂಲದ ನೀವು ಸ್ವಾತಿ ಮೋಹನ್ ಕೈಜೋಡಿಸಿರುವುದನ್ನು ಕೂಡ ಉಲ್ಲೇಖಿಸಿದ್ದಾರೆ.