ನ್ಯೂಯಾರ್ಕ್, ಮಾ.06 (DaijiworldNews/HR): ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್ನ ಉಪಾಧ್ಯಕ್ಷೆ ಮತ್ತು ಮುಖ್ಯ ಕಾರ್ಯಾಚರಣೆ ಅಧಿಕಾರಿಯನ್ನಾಗಿ ಭಾರತೀಯ ಮೂಲದ ಹಣಕಾಸು ಸೇವಾ ಉದ್ಯಮದ ತಜ್ಞೆ ನೌರೀನ್ ಹಸನ್ ಅವರನ್ನು ನೇಮಕ ಮಾಡಲಾಗಿದೆ.
ಆಡಳಿತ ಮಂಡಳಿಯು ನೌರೀನ್ ಹಸನ್ ಅವರನ್ನು ಫಡರಲ್ ರಿಸರ್ವ್ ಬ್ಯಾಂಕ್ ಆಫ್ ನ್ಯೂಯಾರ್ಕ್ನ ಮೊದಲ ಉಪಾಧ್ಯಕ್ಷೆ ಹಾಗೂ ಸಿಓಓ ಆಗಿ ನೇಮಕ ಮಾಡಿದ್ದಾರೆ.
ಮೊದಲ ಉಪಾಧ್ಯಕ್ಷೆಯಾಗಿರುವ ಹಸನ್ ಫೆಡರಲ್ ರಿಸರ್ವ್ ಬ್ಯಾಂಕ್ನ ಅತ್ಯುನ್ನತ ಹುದ್ದೆಯಲ್ಲಿ ಎರಡನೇ ಶ್ರೇಣಿಯಲ್ಲಿದ್ದು, ಜತೆಗೆ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯ ಪರ್ಯಾಯ ಮತದಾನ ಹಕ್ಕು ಹೊಂದಿರುವ ಸದಸ್ಯೆಯೂ ಆಗಿರುತ್ತಾರೆ ಎನ್ನಲಾಗಿದೆ.
ಇನ್ನು ನೌರೀನ್ ಹಸನ್ ಅವರ ತಂದೆ-ತಾಯಿ ಭಾರತದಿಂದ ವಲಸೆ ಬಂದವರಾಗಿದ್ದು, ಹಸನ್ ಅವರು ಇದುವರೆಗೆ ಮೋರ್ಗನ್ ಸ್ಟ್ಯಾನ್ಲೆ ವೆಲ್ತ್ ಮ್ಯಾನೇಜ್ಮೆಂಟ್ನ ಮುಖ್ಯ ಡಿಜಿಟಲ್ ಅಧಿಕಾರಿಯಾಗಿದ್ದರು ಎಂದು ತಿಳಿದು ಬಂದಿದೆ.