ಪಾಕಿಸ್ತಾನ, ಮಾ.06 (DaijiworldNews/HR): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿಶ್ವಾಸ ಮತಯಾಚಿಸಿದ್ದು, ಸರ್ಕಾರದ ಪರ 178 ಮತಗಳು ದಕ್ಕಿ ಈ ಮೂಲಕ ಬಹುಮತವನ್ನ ಸಾಭೀತು ಪಡೆಸಿ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರ ಮುಂದುವರೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಪಾಕಿಸ್ತಾನದ ಹಣಕಾಸು ಸಚಿವ ಅಬ್ದುಲ್ ಹಫೀಜ್ ಶೇಖ್ ಅವರು ಚುನಾವಣೆಯಲ್ಲಿ ಸೋತ ಕಾರಣ ಇಮ್ರಾನ್ ಖಾನ್ ಅವರು ಬಹುಮತ ಸಾಬೀತು ಪಡಿಸುವಂತೆ ವಿರೋದ ಪಕ್ಷದವರು ಆಗ್ರಹಿಸಿದ್ದರು.
ಇನ್ನು ಬೆನಜೀರ್ ಭುಟ್ಟೋ, ನವಾಜ್ ಷರೀಫ್, ಜಫರುಲ್ಲಾ ಜಮಾಲಿ, ಚೌಧರಿ ಶುಜಾತ್, ಶೌಕತ್ಅಜೀಜ್ ಹಾಗೂ ಯೂಸುಫ್ ರಾಜಾ ಗಿಲಾನಿ ಅವರು ಈ ಹಿಂದೆ ವಿಶ್ವಾಸಮತ ಯಾಚನೆ ಮಾಡಿದ್ದರು.
ಇಮ್ರಾನ್ ರಾಜಿನಾಮೆಗೆ ವಿಪಕ್ಷಗಳು ಆಗ್ರಹಿಸಿ ನಡುವೆಯೇ ನಡುವೆ ಇಂದು ವಿಶ್ವಾಸಮತಯಾಚನೆಗೆ ಇಮ್ರಾನ್ ಖಾನ್ ಮುಂದಾಗಿದ್ದು, ಸಧ್ಯ ಪಾಕಿಸ್ತಾನ ಪ್ರಧಾನಿ ಬಹುಮತ ಸಾಭೀತು ಪಡೆಸಿದ್ದಾರೆ ಎನ್ನಲಾಗಿದೆ.