ಐಜ್ವಾಲ್ , ಮಾ.07 (DaijiworldNews/HR): ಮ್ಯಾನ್ಮಾರ್ನಿಂದ ಭಾರತಕ್ಕೆ ಪಲಾಯನ ಮಾಡಿ ಆಶ್ರಯ ಪಡೆದಿರುವ ಎಂಟು ಮಂದಿ ಪೊಲೀಸರನ್ನು ಹಸ್ತಾಂತರಿಸುವಂತೆ ಮ್ಯಾನ್ಮಾರ್ ಮಿಜೋರಾಂ ಸರ್ಕಾರಕ್ಕೆ ಮನವಿ ಮಾಡಿದೆ.
ಸಾಂಧರ್ಭಿಕ ಚಿತ್ರ
"ಮ್ಯಾನ್ಮಾರ್ನ ಫಲಾಮ್ ಜಿಲ್ಲಾಧಿಕಾರಿ ಬರೆದಿರುವ ಪತ್ರ ನಮ್ಮ ಕೈಸೇರಿದ್ದು, ಮ್ಯಾನ್ಮಾರ್ನಿಂದ ಪಲಾಯನ ಮಾಡಿ, ಮಿಜೋರಾಂನಲ್ಲಿ ಆಶ್ರಯ ಪಡೆದಿರುವ ಎಂಟು ಮಂದಿ ಪೊಲೀಸರನ್ನು ಬಂಧಿಸಿ ಹಸ್ತಾಂತರಿಸುವಂತೆ ಕೋರಿದ್ದಾರೆ" ಎಂದು ಚಂಪಾಯಿ ಜಿಲ್ಲಾಧಿಕಾರಿ ಮೈತ್ರಾ ಸಿ.ಟಿ. ಜ್ಯೂಲಿ ಹೇಳಿದ್ದಾರೆ.
ಇನ್ನು ಕಳೆದ ಕೆಲವು ದಿನಗಳಲ್ಲಿ 16 ಮಂದಿ ಮ್ಯಾನ್ಮಾರ್ ಗಡಿ ದಾಟಿ ರಾಜ್ಯಕ್ಕೆ ಆಗಮಿಸಿದ್ದು, ಈ ಪೈಕಿ 11 ಮಂದಿ ಪೊಲೀಸರು ಎಂದು ಹೇಳಿಕೊಂಡಿದ್ದು, ಈ ಎಲ್ಲ ಬೆಳವಣಿಗೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದ್ದು, ಕೇಂದ್ರ ಸರ್ಕಾರದಿಂದ ರಾಜ್ಯ ನಿರ್ದೇಶನ ಬಯಸಿದೆ ಎಂದು ಮೂಲಗಳು ಹೇಳಿವೆ.