ಪಾಕಿಸ್ತಾನ, ಮಾ.07 (DaijiworldNews/HR): ಪಾಕಿಸ್ತಾನದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಹಿಂದು ಕುಟುಂಬದ ಐವರು ಸದಸ್ಯರ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದ್ದು, ಮೇಲ್ನೋಟಕ್ಕೆ ಹತ್ಯೆ ಎಂದು ಶಂಕಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿದೆ ಎನ್ನಲಾಗಿದೆ.
ಅಬುದಾಬಿ ಕಾಲನಿಯಲ್ಲಿನ ನಿವಾಸದಲ್ಲಿ ಐವರ ಮೃತದೇಹ ಹರಿತವಾದ ಆಯುಧದಿಂದ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಇನ್ನು ಮನೆಯಲ್ಲಿ ಹತ್ಯೆಗೆ ಬಳಸಿದ್ದಾರೆನ್ನಲಾದ ಚಾಕು ಮತ್ತು ಕೊಡಲಿ ಸೇರಿದಂತೆ ಹರಿತವಾದ ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.