ಬೀಜಿಂಗ್, ಮಾ.07 (DaijiworldNews/PY): "ಚೀನಾ ಈ ವರ್ಷದ ಜುಲೈ ತಿಂಗಳಿನಲ್ಲಿ ಅರುಣಾಚಲ ಪ್ರದೇಶದ ಗಡಿ ಸಮೀಪವಿರುವ ಟಿಬೆಟ್ಗೆ ಬುಲೈಟ್ ರೈಲು ಆರಂಭಿಸಲಿದ್ದು, ಚೀನಾದ ಎಲ್ಲಾ ಪ್ರಾಂತೀಯ ಮಟ್ಟದ ಪ್ರದೇಶಗಳಿಗೆ ಬುಲೆಟ್ ರೈಲು ಸೇವೆಯನ್ನು ಪ್ರಾರಂಭಿಸಲು ತೀರ್ಮಾನಿಸಿದೆ" ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
"ಲಾಸಾಗೆ 435 ಕಿ.ಮೀ ದೂರದವರೆಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಅನ್ನು ಆರಂಭಿಸಲಾಗುವುದು. ಇಂಧನ ಹಾಗೂ ವಿದ್ಯುತ್ ಚಾಲಿತ ರೈಲು ಇದಾಗಿದೆ" ಎಂದು ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಲಿಮಿಟೆಡ್ನ ಅಧ್ಯಕ್ಷ ಲು ಡುಂಗ್ಫು ಹೇಳಿದ್ದಾರೆ.
"2014ರಲ್ಲಿ, ಪೂರ್ವ ಟಿಬೆಟ್ನ ಲಾಸಾ ಹಾಗೂ ನೈಂಗ್ಚಿಯೊಗೆ ಸಂಪರ್ಕಿಸುವ ರೈಲ್ವೆ ಹಳಿ ನಿರ್ಮಾಣ ಕಾರ್ಯವು ಆರಂಭಗೊಂಡಿತ್ತು. ಇದು ಟಿಬೆಟ್ನ ವಿದ್ದುದ್ದೀಕೃತ ರೈಲು ಮಾರ್ಗವಾಗಿದೆ" ಎಂದು ಟಿಬೆಟ್ನ ರೈಲ್ವೆ ನಿರ್ಮಾಣ ಸಂಸ್ಥೆ ಹೇಳಿದೆ.
ಈ ಮಾರ್ಗದಲ್ಲಿ ಚಲಿಸುವ ಬುಲೆಟ್ ರೈಲು ಪ್ರತಿ 1 ಗಂಟೆಗೆ 160 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. ಚೀನಾವು, 2025 ರ ವೇಳೆಗೆ ಸುಮಾರು 50,000 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ.