ವಾಷಿಂಗ್ಟನ್, ಮಾ.09 (DaijiworldNews/HR): ಕೊರೊನಾ ಲಸಿಕೆಯನ್ನು ಪೂರ್ತಿಯಾಗಿ ಹಾಕಿಸಿಕೊಂಡವರು ಒಳಾಂಗಣದಲ್ಲಿ ಮಾಸ್ಕ್ ಧರಿಸದೇ ಸಣ್ಣದಾಗಿ ಗುಂಪು ಸೇರಬಹುದು, ಆದರೆ ಅನಗತ್ಯ ಪ್ರಯಾಣ ಮತ್ತು ಸಾರ್ವಜನಿಕವಾಗಿ ಮಾಸ್ಕ್ ಧರಿಸದೇ ಓಡಾಡಬಾರದು" ಎಂದು ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಆಡಳಿತ ಹೇಳಿದೆ.
ಅಮೇರಿಕಾದ ಕಾಯಿಲೆ ನಿಯಂತ್ರಣ ಮತ್ತು ತಡೆ ಕೇಂದ್ರವು (ಸಿಡಿಸಿ) ಕೊರೊನಾ ಮಾರ್ಗಸೂಚಿಯಲ್ಲಿ ಕೊಂಚ ಬದಲಾವಣೆ ಮಾಡಿದ್ದು, ಪೂರ್ತಿಯಾಗಿ ಲಸಿಕೆ ಹಾಕಿಸಿಕೊಂಡವರು ಪರಸ್ಪರ ಸಣ್ಣ ಗುಂಪು ಸೇರುವುದಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.
ಇನ್ನು ಪೂರ್ತಿಯಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡವರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಗುಂಪುಗೂಡಬಾರದು. ಲಸಿಕೆ ಹಾಕಿಸಿಕೊಳ್ಳದವರ ಸಂಪರ್ಕಕ್ಕೆ ಬರುವಾಗ ಮಾಸ್ಕ್ ಧರಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.