ಟೊರೊಂಟೊ, ಮಾ11 (DaijiworldNews/MS): ಭಾರತದಲ್ಲಿ ಉತ್ಪಾದಿಸಲಾದ 5 ಲಕ್ಷ ಡೋಸ್ ಕೊರೊನಾ ಲಸಿಕೆ ಪಡೆದುಕೊಂಡಿರುವ ಕೆನಡಾ ದೇಶವು ಭಾರತಕ್ಕೆ ಧನ್ಯವಾದ ಹೇಳಿದೆ. ಈ ಹಿಂದೆ ನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಅವರು ಭಾರತದಿಂದ ಕೆನಡಾಕ್ಕೆ ಲಸಿಕೆ ಪೂರೈಸುವಂತೆ ಕೇಳಿಕೊಂಡಿದ್ದರು.
ಜನವರಿ 20 ರಂದು ಭಾರತದ ಮೇಡ್ ಇನ್ ಇಂಡಿಯಾ ಕೊರೋನಾ ಲಸಿಕೆಗಳ ಸರಬರಾಜು ಆರಂಭಿಸಿದ ನಂತರ ಭಾರತದಿಂದ ವಿದೇಶಗಳಿಗೆ 481 ಲಕ್ಷ ಡೋಸ್ ಕೊರೊನಾ ಲಸಿಕೆಗಳನ್ನು ರಫ್ತು ಮಾಡಲಾಗಿತ್ತು. ಕೆನಡಾ ಕೂಡ 5 ಲಕ್ಷ ಡೋಸ್ ಲಸಿಕೆ ಪಡೆದುಕೊಂಡಿದ್ದು, ಈ ಕಾರಣದಿಂದ ಭಾರತಕ್ಕೆ ಕೆನಡ ಧನ್ಯವಾದ ಹೇಳಿದೆ.
ಲಸಿಕೆ ಪೂರೈಸುವಂತೆ ಕರೆ ಮಾಡಿದ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರುಡೋ ಅವರ ಕೋರಿಕೆ ಪುರಸ್ಕರಿಸಿರುವ ಮೋದಿ, ‘ಕೋವಿಡ್ ಲಸಿಕೆಯನ್ನು ಕೆನಡಾಗೆ ಪೂರೈಸಲು ಭಾರತ ತನ್ನ ಕೈಲಾದಷ್ಟುಪ್ರಯತ್ನ ಮಾಡುತ್ತದೆ’ ಎಂದಿದ್ದರು. ಲಸಿಕೆ ಪಡೆದುಕೊಂಡಿರುವ ಕೆನಡಾ ದೇಶವು ಧನ್ಯವಾದ ಹೇಳಲು ವಿಭಿನ್ನ ಮಾರ್ಗ ಅನುಸರಿಸಿದ್ದು ಬೃಹತ್ ಜಾಹಿರಾತು ಫಲಕಗಳನ್ನು ಅಳವಡಿಸಿದೆ.
ಗ್ರೇಟರ್ ಟೊರೊಂಟೊ ಪ್ರದೇಶ ಸೇರಿದಂತೆ ಹಲವೆಡೆ ಬೃಹತ್ ಜಾಹಿರಾತು ಫಲಕಗಳನ್ನು ಹಾಕುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಭಾರತಕ್ಕೆ ಧನ್ಯವಾದಗಳು ಎಂದು ಹೇಳಲಾಗಿದೆ.