ಡೆನ್ಮಾರ್ಕ್, ಮಾ.11 (DaijiworldNews/HR): ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆ ಹಾಕಿಸಿಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಗಂಭೀರ ಪ್ರಕರಣಳು ಕಾಣಿಸಿಕೊಂಡ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಅಸ್ಟ್ರಾಜೆನೆಕಾದ ಕೊರೊನಾ ಲಸಿಕೆಯ ಬಳಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಡ್ಯಾನಿಶ್ ಆರೋಗ್ಯ ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.
ಲಸಿಕೆಯನ್ನು 14 ದಿನಗಳವರೆಗೆ ಅಮಾನತುಗೊಳಿಸಲಾಗುವುದು ಎಂದು ಆರೋಗ್ಯ ಸಂಸ್ಥೆ ತಿಳಿಸಿದ್ದು, ಇದು ಡ್ಯಾನಿಶ್ ರಕ್ತ ಹೆಪ್ಪುಗಟ್ಟುವ ರೋಗಿಯ ವಿವರಗಳನ್ನು ನೀಡಿಲ್ಲ.
"ಡೆನ್ಮಾರ್ಕ್ ಮತ್ತು ಇತರ ಯುರೋಪಿಯನ್ ದೇಶಗಳಿಂದ ಸಂಭವನೀಯ ಗಂಭೀರ ಅಡ್ಡಪರಿಣಾಮಗಳು ಕಂಡು ಬಂದಿದ್ದು, ನಾವು ಮತ್ತು ಡ್ಯಾನಿಶ್ ಮೆಡಿಸಿನ್ಸ್ ಏಜೆನ್ಸಿ ಇಬ್ಬರೂ ಪ್ರತಿಕ್ರಿಯಿಸಬೇಕಾಗಿದೆ" ಎಂದು ಡ್ಯಾನಿಶ್ ಆರೋಗ್ಯ ಪ್ರಾಧಿಕಾರದ ನಿರ್ದೇಶಕ ಸೊರೆನ್ ಬ್ರೋಸ್ಟ್ರಾಮ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
3 ದಶಲಕ್ಷ ಜನರಲ್ಲಿ ಇಂತಹ ಪ್ರಕರಣಗಳು 22 ಮಂದಿಯಲ್ಲಿ ವರದಿಯಾಗಿದ್ದು, ಮಾರ್ಚ್ 9 ರವರೆಗೆ ಅದನ್ನು ಸ್ವೀಕರಿಸಲಾಗಿದೆ ಎಂದಿದ್ದಾರೆ.
ಲಸಿಕೆ ಸ್ಥಗಿತಗೊಳಿಸಿದ ಪರಿಣಾಮದಿಂದ ಆಗಸ್ಟ್ 15 ರವರೆಗೆ ಸಂಪೂರ್ಣವಾಗಿ ಲಸಿಕೆ ನೀಡಬೇಕೆಂಬ ನಿರೀಕ್ಷೆಯನ್ನು ಮುಂದಕ್ಕಿಡಲಾಗಿದೆ ತಳ್ಳಿದೆ ಎಂದು ಸಂಸ್ಥೆ ಹೇಳಿದೆ.