ದ ಹಾಗ್, ಮಾ 13 (DaijiworldNews/MS): ಆಡಿಯೊ ಕ್ಯಾಸೆಟ್ ಟೇಪ್ ಅನ್ನು ಕಂಡುಹಿಡಿದ ಕೀರ್ತಿಗೆ ಪಾತ್ರರಾದ ನೆದರ್ಲೆಂಡ್ಸ್ನ ಲಾವೊ ಒಟೆನ್ಸ್ ಅವರು ನಿಧನರಾಗಿದ್ದಾರೆ. ಅವರಿಗೆ 94 ವರ್ಷವಾಗಿತ್ತು.
ಇವರು ಕ್ಯಾಸೆಟ್ ಗಳನ್ನು 1960 ರ ದಶಕದಲ್ಲಿ ಪರಿಚಯಿಸಿದಾಗಿನಿಂದ ಅಂದಾಜು 100 ಶತಕೋಟಿ ಕ್ಯಾಸೆಟ್ ಟೇಪ್ಗಳನ್ನು ವಿಶ್ವದಾದ್ಯಂತ ಮಾರಾಟ ಮಾಡಲಾಗಿದೆ.
ಇವರು ಕಾಂಪ್ಯಾಕ್ಟ್ ಡಿಸ್ಕ್ ಅಭಿವೃದ್ಧಿಪಡಿಸಲು ಒಟೆನ್ಸ್ ಅವರು ಫಿಲಿಪ್ಸ್ ಕಂಪನಿಗೆ ನೆರವಾಗಿದ್ದರು.1963 ರಲ್ಲಿ, ಇದನ್ನು ಬರ್ಲಿನ್ ರೇಡಿಯೋ ಎಲೆಕ್ಟ್ರಾನಿಕ್ಸ್ ಮೇಳದಲ್ಲಿ ಪ್ರಸ್ತುತಪಡಿಸಿದ್ದು, ಆ ಬಳಿಕ ಶೀಘ್ರದಲ್ಲೇ ವಿಶ್ವದಾದ್ಯಂತ ಯಶಸ್ವಿಯಾಯಿತು.
ಡೆಲ್ಫ್ನ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದ ಅವರು 1952ರಲ್ಲಿ ಫಿಲಿಪ್ಸ್ ಕಂಪನಿ ಸೇರಿದ್ದರು. 1960 ರಲ್ಲಿಕಂಪನಿಯ ಉತ್ಪನ್ನಗಳ ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿದ್ದು, ಟೇಪ್ ರೆಕಾರ್ಡರ್ಗೆ ಪರ್ಯಾಯವನ್ನು ಅನ್ವೇಷಿಸಲು ಒತ್ತು ನೀಡಿದ್ದರು.
ಧ್ವನಿ ಸಂಗ್ರಹಣ ಟೇಪ್ ಮತ್ತು ಪ್ಲೇಯರ್ಗಳು ಸುಲಭವಾಗಿ ಬಳಸುವಂತೆ ಇರಬೇಕು ಮತ್ತು ದೊರೆಯಬೇಕು ಎಂಬುದು ಇವರ ಗುರಿಯಾಗಿತ್ತು.ಒಟೆನ್ಸ್ ನವರ ಆವಿಷ್ಕಾರವು ಜನರು ಸಂಗೀತವನ್ನು ಆಲಿಸುವ ವಿಧಾನವನ್ನು ಮಾರ್ಪಡಿಸಿ ಅಮೋಘ ಬದಲಾವಣೆ ತಂದಿತ್ತು. ಧ್ವನಿಸುರುಳಿ ಮತ್ತು ಟೇಪ್ ರೆಕಾರ್ಡರ್ಗಳು 90ನೇ ದಶಕದ ಅಂತ್ಯದವರೆಗೂ ಅಸಂಖ್ಯ ಸಂಗೀತ ಪ್ರಿಯರು ಹಾಗೂ ಕೇಳುಗರ ಮೆಚ್ಚಿನ ಸಾಧನಗಳಾಗಿದ್ದವು.