ಇಸ್ಲಾಮಾಬಾದ್,ಮಾ. 14 (DaijiworldNews/HR): ಇತ್ತೀಚೆಗೆ ವೆಡ್ಡಿಂಗ್ ಫೋಟೋ ಶೂಟ್ ಬಹಳ ಟ್ರೆಂಡ್ ಆಗುತ್ತಿದ್ದು, ಬೇರೆ ಬೇರೆ ರೀತಿಯಲ್ಲಿ ಜೋಡಿಗಳು ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅಂತೆಯೇ ಇದೀಗ ಪಾಕಿಸ್ತಾನದಲ್ಲಿ ಜೋಡಿಯೊಂದು ಹುಲಿಯ ಮರಿಯ ಪಕ್ಕದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಬಾರೀ ಆಕ್ರೋಶಕ್ಕೆ ಗುರಿಯಾಗಿದೆ ಎನ್ನಲಾಗಿದೆ.
ಇನ್ಸ್ಟಾಗ್ರಾಂ ಖಾತೆಯಲ್ಲಿ ಪಾಕಿಸ್ತಾನದ ಸ್ಟುಡಿಯೋವೊಂದು ಈ ಫೋಟೋವನ್ನು ಹಂಚಿಕೊಂಡಿದ್ದು, ಫೋಟೋಗಾಗಿಯೇ ಹುಲಿ ಮರಿಯನ್ನು ತರಲಾಗಿತ್ತು. ಅದು ನಿದ್ದೆ ಮಾಡುತ್ತಿರುವಾಗ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ನೆಟ್ಟಿಗರ ಪ್ರಕಾರ ಇದು ಪ್ರಾಣಿ ಹಿಂಸೆಗೆ ಸಮವಾಗಿದ್ದು ದಂಪತಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ ಎನ್ನಲಾಗಿದೆ.
ಇನ್ನು ಆಕ್ರೋಶದ ಬಳಿಕ ಸ್ಟುಡಿಯೋ ಆ ಫೋಟೋವನ್ನು ತನ್ನ ಖಾತೆಯಿಂದ ಡಿಲೀಟ್ ಮಾಡಿದ್ದು, ಆದಾಗ್ಯೂ ಅದರ ಸ್ಕ್ರೀನ್ ಶಾಟ್ ಗಳು ಹರಿದಾಡುತ್ತಿವೆ.
ಫೋಟೋಗಳು ವೈರಲ್ ಆದ ಬಳಿಕ, ಸ್ಟುಡಿಯೋ ಈ ಪ್ರಾಣಿಯನ್ನು ದುರುಪಯೋಗಪಡಿಸಿಕೊಂಡಿಲ್ಲ ಅಥವಾ ಅದಕ್ಕೆ ನಿದ್ರೆ ಭರಿಸುವ ಔಷಧಿ ಕೊಟ್ಟಿಲ್ಲ, ಅದು ಸಾಕುಪ್ರಾಣಿ ಆಗಿದ್ದು ಫೋಟೋಶೂಟ್ ಸಮಯದಲ್ಲಿ ಅದರ ಮಾಲೀಕರು ಸಹ ಇದ್ದರು ಎಂದು ಸ್ಪಷ್ಟಪಡಿಸಿದೆ.