ಲಂಡನ್, ಮಾ.16 (DaijiworldNews/HR): ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ತನ್ನ ಒಡೆತನದ ಬೇರೆ ಬೇರೆ ಡಿಜಿಟಲ್ ವೇದಿಕೆ, ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿಗಳು ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಫೇಸ್ಬುಕ್, ಕೊರೊನಾ ಲಸಿಕೆ ಕುರಿತ ಪೋಸ್ಟ್ಗಳಿಗೆ ವಿಶ್ವಾಸಾರ್ಹ ಮಾಹಿತಿಯುಳ್ಳ ಪಟ್ಟಿಯನ್ನು ಸೇರಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಮಾರ್ಕ್ ಜುಕರ್ ಬರ್ಗ್
ಈ ಬಗ್ಗೆ ಬ್ಲಾಗ್ ಪೋಸ್ಟ್ನಲ್ಲಿ ಫೇಸ್ಬುಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಾರ್ಕ್ ಜುಕರ್ ಬರ್ಗ್ಬರೆದುಕೊಂಡಿದ್ದು, "ಕೊರೊನಾ ಲಸಿಕೆಗೆ ಸಂಬಂಧಿಸಿದ ಎಲ್ಲ ಪೋಸ್ಟ್ಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡುವ ವಿಶ್ವಾಸಾರ್ಹ ಮಾಹಿತಿಯ ಪಟ್ಟಿಯನ್ನು ಲಗತ್ತಿಸಲಾಗಿರುತ್ತಿದ್ದು, ಈ ಮಾಹಿತಿ ಸದ್ಯ ಇಂಗ್ಲಿಷ್ ಮತ್ತು ಇತರ ಐದು ಭಾಷೆಗಳಲ್ಲಿರುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಭಾಷೆಗಳನ್ನು ಸೇರಿಸಲಾಗುತ್ತದೆ" ಎಂದಿದ್ದಾರೆ.
ಇನ್ನು ಕೊರೊನಾ ಲಸಿಕೆಗಳ ಸುರಕ್ಷತೆ ಕುರಿತು ಚರ್ಚಿಸುವ ಪೋಸ್ಟ್ಗಳಲ್ಲಿ ಹಾಕಿರುವ ಮಾಹಿತಿಯ ಪಟ್ಟಿಯಲ್ಲಿ, ಕೊರೊನಾ ಲಸಿಕೆಗಳನ್ನು ಅನುಮೋದಿಸುವ ಮೊದಲು, ಸುರಕ್ಷತೆ ಮತ್ತು ಪರಿಣಾಮಕಾರಿಯಾಗಿ ನಡೆದಿರುವ ಪರೀಕ್ಷೆಗಳ ಕುರಿತು ಮಾಹಿತಿ ಇರುತ್ತದೆ" ಎಂದು ಜುಕರ್ಬರ್ಗ್ ಹೇಳಿದ್ದಾರೆ.